ಬಸ್​ ಹತ್ತುವಾಗ ಚಿನ್ನದ ಮಾಂಗಲ್ಯ ಸರ ಕಳ್ಳತನ

Crime Logo
Published on

ರಾಣೆಬೆನ್ನೂರ: ಬಸ್​ ಹತ್ತುವಾಗ ಮಹಿಳೆಯ ಕೊರಳಲ್ಲಿದ್ದ 1.80 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ದೋಚಿರುವ ಘಟನೆ ನಗರದ ಬಸ್​ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ಪಾರ್ವತಿ ಪ್ರಭುಗೌಡ ಚನ್ನಗೌಡ್ರ ಎಂಬುವರ ಚಿನ್ನದ ಸರ ದೋಚಿರುವುದು.

ಇವರು ಚಿಕ್ಕಕುರುವತ್ತಿಗೆ ಹೋಗುವ ಸಲುವಾಗಿ ಬಸ್​ ನಿಲ್ದಾಣದಲ್ಲಿ ಬಸ್​ ಹತ್ತುತ್ತಿದ್ದ ಸಮಯದಲ್ಲಿ ಯಾರೋ ಮಾಂಗಲ್ಯ ಸರ ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net