ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

PTR_4 MAY_6
Published on

ವಿಟ್ಲ: ಉರಿಮಜಲಿನಲ್ಲಿ ಕೇರಳ ರಾಜ್ಯ ಸಾರಿಗೆ ಬಸ್ಸಿನ ಗಾಜು ಏಕಾಏಕಿ ಒಡೆದು ಚಾಲಕ ಸೇರಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಸರ್ಕಾರಿ ಬಸ್ ಉರಿಮಜಲು ತಲುಪುತ್ತಿದ್ದಂತೆ ಮುಂಭಾಗ ಗಾಜು ಮುರಿದು ಚಾಲಕ ಪಿ. ರಾಜನ್(೫೩) ಮತ್ತು ಓರ್ವ ಮಗುವಿಗೆ ಗಾಯವಾಗಿದೆ.


ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಗಂಭೀರ ಗಾಯಗೊಂಡ ಮಗುವನ್ನು ಪುತ್ತೂರು ಆಸ್ಪತ್ರೆ ಕೊಂಡೊಯ್ಯಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ.
ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮುಂಭಾಗದ ಗಾಜಿನಲ್ಲಿ ಬಿರುಕು ಇದ್ದು, ಓಡಾಟದ ಸಮಯದಲ್ಲಿ ಹೊರಭಾಗದಲ್ಲಿ ವಸ್ತು ಹಾರಿದರೂ ಈ ರೀತಿಯಲ್ಲಿ ಒಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net