

ಮುಂಡಗೋಡ: ಬಸ್ ಡಿಪೋ ಉದ್ಘಾಟನೆಗೊಂಡ ವರ್ಷ ಉರುಳಿದರೂ ಕಾರ್ಯಾರಂಭವಾಗಿಲ್ಲ. ಕೂಡಲೆ ಬಸ್ ಡಿಪೋ ಆರಂಭಿಸುವಂತೆ ರಾಜ್ಯ ಅನ್ನದಾತ ರೈತ ಸಂಘದವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕಳೆದ ವರ್ಷ ಮುಂಡಗೋಡ ಬಸ್ ಡಿಪೋ ಉದ್ಘಾಟನೆ ಮಾಡಿದ್ದೀರಿ. ಆದರೆ, ಇದೂವರೆಗೂ ಬಸ್ ಡಿಪೋ ಕಾರ್ಯಾರಂಭ ಮಾಡಿಲ್ಲ. ಇದರಿಂದ ನಮ್ಮ ತಾಲೂಕಿನ ಜನತೆಗೆ ಸಮರ್ಪಕವಾದ ಬಸ್ ಸೌಲಭ್ಯ ದೊರೆಯುತ್ತಿಲ್ಲ. ಬಹುತೇಕ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ವಿುಸಿರುವ ಬಸ್ ಡಿಪೋ ಆರಂಭಿಸಬೇಕು ಹಾಗೂ ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ಮುಂಡಗೋಡನಿಂದ ಬಸ್ ಓಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘಟನೆಯ ಅಧ್ಯಕ್ಷ ಚಿದಾನಂದ ಹರಿಜನ, ಗೋವಿಂದಪ್ಪ ಬೆಂಡ್ಲಗಟ್ಟಿ, ಎಸ್.ಎಸ್. ಪಾಟೀಲ. ಹನುಮಂತ ಆರೆಗೊಪ್ಪ ಮುಂತಾದವರಿದ್ದರು