

ಹೊಸೂರು: ಹೊಸೂರಿನ ದರ್ಗಾ ಬಳಿ ಬೆಂಗಳೂರು&ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ನ ಮುಂದಿನ ಟಯರ್ ಸ್ಫೋಟಗೊಂಡು ಬಸ್ ಹೆದ್ದಾರಿ ಬದಿಯ ಕಾಂಪೌಂಡ್ಗೆ ಡಿಕ್ಕಿಯಾಗಿ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ತಡೆಗೋಡೆ ಮುರಿದು ಎರಡು ಸರ್ವೀಸ್ ರಸ್ತೆಗಳನ್ನು ದಾಟಿ ಕಾರ್ಖಾನೆಯ ಕಾಂಪೌಂಡ್ಗೆ ಡಿಕ್ಕಿಯಾಗಿದೆ. ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಹೊಸೂರಿಗೆ ಬರುತ್ತಿದ್ದು, ಚಾಲಕ ಮಣಿ, ಕಂಡಕ್ಟರ್ ಮುನಿರಾಜ್ ಸರಿ ಬಸ್ನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಗಾಯಾಳುಗಳನ್ನು ರಸಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ನೆಲಮಂಗಲ: ಸಾರಿಗೆ ಕಚೇರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿರುವ ಅರೋಪ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿ ಬಳಿಯ ಸಾರಿಗೆ ಕಚೇರಿಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಯಾಗಿರುವ ರಾಜಕುಮಾರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಚೇರಿಯ ಮಹಿಳಾ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ರಾಜ್ಕುಮಾರ್ ಮೊಬೈಲ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ರಾಜಕುಮಾರ್ ನನ್ನನ್ನು ಕಚೇರಿಯ ಕೊಠಡಿಗೆ ಕರೆಸಿಕೊಂಡು ಬೆದರಿಕೆಯೊಡ್ಡಿ ನಾನು ಹಾಕಿಕೊಂಡಿದ್ದ ಜರ್ಕಿನ್ಅನ್ನು ಬಲವಂತವಾಗಿ ಬಿಚ್ಚಿಸಿ ಅಸಭ್ಯವಾಗಿ ದಿಟ್ಟಿಸಿ ನೋಡಿದರು. ಈ ಹಿಂದೆಯೂ ನಾನು ಸಮವಸ್ತ್ರದಲ್ಲಿದ್ದಾಗ ಅನೇಕ ಬಾರಿ ಕೆಟ್ಟದಾಗಿ ದಿಟ್ಟಿಸಿ ನೋಡುತ್ತಿದ್ದರು. ಇದರಿಂದ ಮುಜುಗರಕ್ಕೀಡಾಗಿ ಕೆಲಸ ಬಿಡಲು ಯೋಚಿಸಿದ್ದು, ಬಳಿಕ ನನ್ನ ಪತಿ ಧೈರ್ಯ ತುಂಬಿ, ಜರ್ಕಿನ್ ಹಾಕಿಕೊಂಡು ಹೋಗು ಎಂದು ಸಲಹೆ ನೀಡಿದ್ದರು. ಅದರಂತೆ ಜರ್ಕಿನ್ ಹಾಕಿಕೊಂಡು ಬಂದರೂ ಅದನ್ನು ಬಿಚ್ಚಿಸಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರ್ಟಿಒ ಇನ್ಸ್ಪೆಕ್ಟರ್ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳಾ ಸಂಟನೆಗಳ ಆಕ್ರೋಶ : ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಮಹಿಳಾ ಸಂಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿ ರಾಜ್ಕುಮಾರ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿವೆ.