ಸಹಕಾರ ಸಾರಿಗೆ ಬಸ್​ಗಳ ಮಾರ್ಗದಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭ

web 2
Published on

ಕೊಪ್ಪ: ಸಹಕಾರ ಸಾರಿಗೆ ಬಸ್ ಸಂಚಾರವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳು ಜನರಿಗೆ ತೊಂದರೆಯಾಗದಂತೆ ಮಣಿಪಾಲ್, ಉಡುಪಿ, ಗ್ರಾಮೀಣ ಪ್ರದೇಶದಲ್ಲಿ ಬಸ್ ಸೇವೆ ಒದಗಿಸಿದೆ.

ಸಹಕಾರ ಸಾರಿಗೆ ಸಂಸ್ಥೆ ಹಣಕಾಸು ಇಲಾಖೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ಬಸ್ ಸೇವೆ ಸ್ಥಗಿತಗೊಳಿಸಿ ವಾರದಿಂದ ಧರಣಿ ನಡೆಸುತ್ತಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ ಕೂಲಿ ಕಾರ್ವಿುಕರು, ವಿದ್ಯಾರ್ಥಿಗಳಿಗೆ ಶನಿವಾರದಿಂದ ಕೆಎಸ್​ಆರ್​ಟಿಸಿ ಸೇವೆ ಆರಂಭವಾಗಿದ್ದರಿಂದ ಅನುಕೂಲವಾಗಿದೆ.

ಸಹಕಾರ ಸಾರಿಗೆ ಸಂಚಾರಿಸುತ್ತಿದ್ದ ಸಮಯ ಮತ್ತು ಅದೇ ಮಾರ್ಗದಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭವಾಗಿದ್ದು ಉಡುಪಿ ಮಾರ್ಗಕ್ಕೆ ಮಿನಿ 4, ಚಿಕ್ಕಮಗಳೂರು-ಕೊಪ್ಪ -ಶೃಂಗೇರಿ-ಎನ್.ಆರ್.ಪುರಕ್ಕೆ 9,ಶೃಂಗೇರಿ -ಶಿವಮೊಗ್ಗಕ್ಕೆ 9 ಬಸ್ ಸೇರಿದಂತೆ ಒಟ್ಟು 22 ಬಸ್​ಗಳಿಂದ 45 ರಿಂದ 50 ಟ್ರೀಪ್ ಸಂಚಾರ ನಡೆಸಲಿವೆ.

ಕೊಪ್ಪದಿಂದ ಕಟ್ಟಿನಮನೆ ಮಾರ್ಗವಾಗಿ ಚಿಕ್ಕಗ್ರಹಾರಕ್ಕೆ ಶಾಲಾ ಸಮಯದಲ್ಲಿ, ಗುಣವಂತೆ ಮಾರ್ಗವಾಗಿ ಮಕ್ಕಿಮನೆಗೆ ಬೆಳಗ್ಗೆ 8.30ಕ್ಕೆ ಹಾಗೂ ಸಂಜೆ 4.30ಕ್ಕೆ, ಸಿದ್ದರಮಠ, ಮೃಗವಧೆಗೆ 9 ಗಂಟೆಗೆ, ಕೊಪ್ಪದಿಂದ ಮೇಗೂರು, ಮೇಲ್ಪಾಲ್, ಬಾಳೆಹೊನ್ನೂರಿನಿಂದ ಶಿರವಾಸೆ, ಮಲ್ಲಂದೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಸಹಕಾರ ಸಾರಿಗೆ ಸಮಯದಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರಿಸಲಿದೆ.

ವಿದ್ಯಾರ್ಥಿಗಳು ಸಹಕಾರ ಸಾರಿಗೆ ಬಸ್​ಪಾಸ್ ಪಡೆದಿದ್ದರೆ ಪಾಸ್ ದರಕ್ಕೆ ಪ್ರಯಾಣಿಸಬಹುದು. ಕೆಎಸ್​ಆರ್​ಟಿಸಿಗೆ ನಿಯಮಿತ ಸ್ಟಾಪ್​ಗಳಿದರೂ ಜನರ ಉಪಯೋಗಕ್ಕಾಗಿ ಸಹಕಾರ ಸಾರಿಗೆ ನೀಡುತ್ತಿದ್ದ ಸೇವೆಯಂತೆ ನಾವು ಸೇವೆ ನೀಡುತ್ತಿದ್ದೆವೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿ ವರದರಾಜ್ ವಿಜಯವಾಣಿಗೆ ಮಾಹಿತಿ ನೀಡಿದರು.

ಪ್ರತಿಭಟನೆ ಮುಂದುವರಿಕೆ: ಬಾಳಗಡಿಯ ತಾಲೂಕು ಕಚೇರಿ ಎದುರು ಸಹಕಾರಿಗೆ ಅಡಳಿತ ಮಂಡಳಿ ಹಾಗೂ ಕಾರ್ವಿುಕರು ನಡೆಸುತ್ತಿರುವ ಧರಣಿ ಮುಂದುವರೆದಿದ್ದು. ಭಾನುವಾರವೂ ಪ್ರತಿಭಟನೆ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net