ಹಣಕ್ಕೆ ಆಸೆಪಡದೇ- ಹೀರೋ ಆದ ಬಸ್‌ ಚಾಲಕ, ನಿರ್ವಾಹಕ

condector returned bag to passenger
Published on

ಕಾರವಾರ: ಕೈಗೆ ಅನಾಯಾಸವಾಗಿ ಸಿಕ್ಕ ಲಕ್ಷಾಂತರ, ದುಡ್ಡು, ಬಂಗಾರಕ್ಕೆ ಆಸೆಪಡದೇ ಪ್ರಾಮಾಣಿಕತೆಗೆ ಬೆಲೆಕೊಟ್ಟ ಬಸ್‌ ಚಾಲಕ ನಿರ್ವಾಹಕರು ಮಾದರಿಯಾಗಿದ್ದಾರೆ.
ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಬಿಟ್ಟು ಹೋಗಿದ್ದ ಆಭರಣ ಹಾಗೂ ನಗದು ಇದ್ದ ಬ್ಯಾಗ್‌ನ್ನು ಚಾಲಕ ಹಾಗೂ ನಿರ್ವಾಹಕರು ಮರಳಿಸಿದ್ದಾರೆ.
ಮೇ.29 ರ ಚಿಕ್ಕಮಗಳೂರು-ಕಾರವಾರ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದರು. ಅದರಲ್ಲಿ 3.50 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, ಹಾಗೂ 1 ಲಕ್ಷ ರೂ.ನಗದು, ಮೊಬೈಲ್ ಮುಂತಾದ ವಸ್ತುಗಳಿದ್ದವು. ಅದನ್ನು ಗಮನಿಸಿದ ನಿರ್ವಾಹಕ ಹರೀಶ ಎಚ್. ಹಾಗೂ ಚಾಲಕ ಸ್ಟೀಫನ್ ಫರ್ನಾಂಡಿಸ್ ಅವರು ಅದನ್ನು ಪೊಲೀಸರಿಗೆ ತಿಳಿಸಿ, ಪ್ರಯಾಣಿಕರಿಗೆ ಮರಳಿಸಿದ್ದಾರೆ. ಘಟಕ ವ್ಯವಸ್ಥಾಪಕಿ ಸೌಮ್ಯಾ ನಾಯಕ ಅವರ ಸಮ್ಮುಖದಲ್ಲಿ ಅದನ್ನು ಹಸ್ತಾಂತರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net