

ಸುಂಟಿಕೊಪ್ಪ: ಏಳನೇ ಹೊಸಕೋಟೆ ಸರ್ಕಾರಿ ಶಾಲಾ ಮುಂಭಾಗದಲ್ಲಿ ಆಟೋ ರಿಕ್ಷಾಗೆ ಗುರುವಾರ ರಾತ್ರಿ ಪ್ರವಾಸಿ ಬಸ್ ಡಿಕ್ಕಿಯಾಗಿ ರಿಕ್ಷಾ ಚಾಲಕ ಗಾಯಗೊಂಡಿದ್ದಾರೆ.
ಕೊಪ್ಪ ನಿವಾಸಿ, ಆಟೋ ಚಾಲಕ ಜೀವನ್‌ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಅವಘಡದಿಂದಾಗಿ ಆಟೋ ರಿಕ್ಷಾ ರಸ್ತೆಯಲ್ಲಿ ಮಗುಚಿಕೊಂಡು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.