ಮರಕ್ಕೆ ಬಸ್ ಡಿಕ್ಕಿ- 15 ಪ್ರಯಾಣಿಕರಿಗೆ ಗಾಯ

bus
Published on

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ಗಾಯಾಳು ಗಾಯತ್ರಿ ಮಾರುತಿ ಅಂಬಿಗ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕಾರವಾರ ಘಟಕಕ್ಕೆ ಸೇರಿದ ಬಸ್ ಶಿರಸಿ ಮಾರ್ಗವಾಗಿ ಬೆಂಗಳೂರಿಗೆ ಹೊರಟಿತ್ತು. ಚಾಲಕ ಎಚ್.ಬಿ. ಸ್ವಾಮಿ ಬಸ್ ಬಿಡಬೇಕಾದ ವೇಳೆ ಪ್ರಯಾಣಿಕರೊಬ್ಬರ ಲಗೇಜ್ ಕೆಳಗೆ ಬಿದ್ದಿದೆ. ಚಾಲಕ ಲಕ್ಷೃ ಅತ್ತ ಹೊರಳಿದಾಗ ಏಕಾಏಕಿ ಬಸ್ ಮುಂದಕ್ಕೆ ಚಲಿಸಿ ಸುಮಾರು 30 ಅಡಿ ದೂರದ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸ್‌ನ ಎಡ ಮುಂಭಾಗ ಜಖಂಗೊಂಡಿದೆ.

ಪಿಎಸ್‌ಐ ಉದ್ದಪ್ಪ ಧರೆಪ್ಪನವರ, ಎಟಿಎಸ್ ಶಿವಾನಂದ ನಾಯ್ಕ, ಸಂಚಾರಿ ನಿಯಂತ್ರಕ ಪ್ರಕಾಶ ನಾಯ್ಕ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net