ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ

8--npk--2
ನಾಪೋಕ್ಲು ಖಾಸಗಿ ಶಾಲಾ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ.
Published on

ನಾಪೋಕ್ಲು: ಸ್ಥಳೀಯ ಖಾಸಗಿ ಶಾಲಾ ಬಸ್ಸೊಂದು ಶನಿವಾರ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಶಾಲೆಗೆ ವಿದ್ಯಾರ್ಥಿಗಳನ್ನು ಬಿಟ್ಟು ನೆಲಜಿ ಕಡೆಯಿಂದ ನಾಪೋಕ್ಲುಗೆ ಹಿಂತಿರುಗುವಾಗ ಹಳೆ ತಾಲೂಕಿನ ಕುಲ್ಲೇಟಿರ ರಾಜಾ ಎಂಬವರ ಮನೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ತುಂಡಾಗಿದ್ದು, ಅದಕ್ಕೆ ಆಧಾರವಾಗಿ ಮತ್ತೊಂದು ಕಂಬವಿದುದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ. ಇಲ್ಲದಿದ್ದರೆ ಬಸ್ ಮೇಲೆ ವಿದ್ಯುತ್ ತಂತಿ ಬಿದ್ದು ಅಪಾಯವಾಗುವ ಸಂಭವವಿತ್ತು. ಬಸ್ಸಿನಲ್ಲಿದ್ದ ಚಾಲಕ ಮತ್ತು ಕ್ಲೀನರ್‌ಗೆ ಯಾವುದೇ ಗಾಯಗಳಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net