

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಖಾಸಗಿ ಬಸ್ಸೊಂದು ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ತಡೆಗೋಡೆ ಕುಸಿದಿದೆ.
ಬಸ್ ಡಿಕ್ಕಿಯಾದ ಸ್ಥಳದಲ್ಲಿ ಆಳವಾದ ಕಂದಕವಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಈ ಸ್ಥಳದಲ್ಲಿ ಬಣಕಲ್ ಪೊಲೀಸರು ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಚಾರ್ಮಾಡಿ ಘಾಟಿ ಹತ್ತನೇ ತಿರುವಿನ ಸಮೀಪ ಉಡುಪಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮತ್ತು ಶಿವಮೊಗ್ಗ ಕಡೆ ಸಾಗುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಾಟಿ ಪರಿಸರದಲ್ಲಿ ಮಂಜು ಕವಿದ ವಾತಾವರಣ ಹಾಗೂ ಮಳೆ ಇದ್ದು, ರಸ್ತೆ ಬದಿ ಗಮನಕ್ಕೆ ಬಾರದೆ ಅಪಘಾತಗಳು ಉಂಟಾಗುತ್ತಿವೆ.