ಬಸ್ ಬ್ರೇಕ್ ಫೇಲ್, ತಪ್ಪಿದ ಅನಾಹುತ

lng Bus Accident
ಗುಡದನಾಳ ಗ್ರಾಮದಲ್ಲಿ ಮರಳಿನ ದಿಮ್ಮಿಗೆ ಗುದ್ದಿದ ಬಸ್.
Published on

ಲಿಂಗಸುಗೂರು: ಪಟ್ಟಣದಿಂದ ಹಟ್ಟಿಗೆ ಹೊರಟಿದ್ದ ಸರ್ಕಾರಿ ಬಸ್‌ನ ಬ್ರೇಕ್ ಫೇಲ್ ಆಗಿ ಮರಳಿನ ದಿಮ್ಮಿಗೆ ಡಿಕ್ಕಿ ಹೊಡೆದು ನಿಂತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಶನಿವಾರ ಸಂಜೆ ಲಿಂಗಸುಗೂರಿನಿಂದ ಹಟ್ಟಿಚಿನ್ನದಗಣಿಗೆ ಬಸ್ ಹೊರಟಿತ್ತು. ಲಿಂಗಸುಗೂರು ಪಟ್ಟಣದಿಂದ 5 ಕಿಮೀ ದೂರದಲ್ಲಿದ್ದ ಗುಡದನಾಳ ಗ್ರಾಮದ ಹತ್ತಿರ ಬಸ್ ಬ್ರೇಕ್ ಫೇಲಾಗಿದೆ.

ಪ್ರಯಾಣಿಕರು ಗಾಬರಿಗೊಂಡು ಚೀರಾಡಿದ್ದು, ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ಮರಳಿನ ದಿಮ್ಮಿಗೆ ಚಾಲಕ ಬಸ್ ಗುದ್ದಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾನೆ. ಮರಳಿನ ದಿಮ್ಮಿ ಇರದೇ ಹೋಗಿದ್ದರೆ ಗ್ರಾಮದ ಮನೆಗಳಿಗೆ ಡಿಕ್ಕಿ ಹೊಡೆಯುವ ಸಂಭವವಿತ್ತು ಎಂದು ಪ್ರಯಾಣಿಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net