ಬಸ್​ ಹತ್ತುತ್ತಿದ್ದಾಗ ಚಿನ್ನದ ಸರ ದೋಚಿದ ದುರುಳರು

Crime Logo
Published on

ರಾಣೆಬೆನ್ನೂರ: ಬಸ್​ ಹತ್ತುತ್ತಿದ್ದಾಗ ಮಹಿಳೆಯ ಕೊರಳಲಿದ್ದ ಚಿನ್ನದ ಸರವನ್ನು ಯಾರೋ ದುಷ್ಕಮಿರ್ಗಳು ದೋಚಿದ ಟನೆ ನಗರದ ಗುತ್ತಲ ಬಸ್​ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ದಾವಣಗೆರೆಯ ಗೀತಾ ಜಗದೀಶ ಪೂಜಾರ ಎಂಬುವರ ಸರ ಕಳ್ಳತನ ಮಾಡಿರುವುದು.
ಇವರು ಗುತ್ತಲ ಬಸ್​ ನಿಲ್ದಾಣದಲ್ಲಿ ರಾಣೆಬೆನ್ನೂರ&ಗುತ್ತಲ ಬಸ್​ ಹತ್ತುತ್ತಿದ್ದ ಸಮಯದಲ್ಲಿ ಯಾರೋ ದುಷ್ಕಮಿರ್ಗಳು ಇವರ ಕೊರಳಲಿದ್ದ 1.32 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net