ಬಸ್-ಬೈಕ್ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಮರಣ

BIKE ACCIDENT
Published on

ಕುಂದಗೋಳ: ಸರ್ಕಾರಿ ಬಸ್​ಗೆ ಬೈಕ್ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ತರ್ಲಘಟ್ಟ ಹಾಗೂ ಹಿರೇಹರಕುಣಿ ಗ್ರಾಮದ ಮಧ್ಯೆ ಸೋಮವಾರ ಸಂಭವಿಸಿದೆ. ಬೈಕ್ ಸವಾರ ಬು. ತರ್ಲಘಟ್ಟ ಗ್ರಾಮದ ಇಸ್ಮಾಯಿಲ್​ಸಾಬ್ ಅಬ್ದುಲ್​ಅಜೀಜ್ ಶೇಖ್ (30) ಹಾಗೂ ಹಿರೇಹರಕುಣಿ ಗ್ರಾಮದ ತಬ್ರಿಜ್ ದಾದಾಪೀರ ದೊಡ್ಡಮನಿ (5) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಿರೇಹರಕುಣಿ ಗ್ರಾಮದ ದಾದಾಪೀರ ನಬೀಸಾಬ್ ದೊಡ್ಡಮನಿ ಹಾಗೂ ರೇಷ್ಮಾ ದಾದಾಪೀರ ದೊಡ್ಡಮನಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಇವರಿಬ್ಬರನ್ನು ಕುಂದಗೋಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಣೂರಿನಿಂದ ಕುಂದಗೋಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಹಿರೇಹರಕುಣಿಯಿಂದ ತರ್ಲಘಟ್ಟ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net