ಕುಕನೂರು: ತಾಲೂಕಿನ ಮುತ್ತಾಳ ಗ್ರಾಮದ ಕ್ರಾಸ್ ಬಳಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಿಟ್ಟಾಲಿ ಗ್ರಾಮದ ನಿಂಗಪ್ಪ ಗುರಡ್ಡಿ (40) ಮೃತ. ಇನ್ನೊಬ್ಬ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.