ಕಾರ್ಕಳದ ಬಳಿ ಬಂಡೆಗಲ್ಲಿಗೆ ಪ್ರವಾಸಿ ಬಸ್​​ ಡಿಕ್ಕಿ: 9 ಪ್ರಯಾಣಿಕರ ದಾರುಣ ಸಾವು

Bus Accident
Published on

ಉಡುಪಿ: ಮೈಸೂರಿನ ಟೂರಿಸ್ಟ್ ಬಸ್ಸೊಂದು ಕಾರ್ಕಳದ ಎಸ್.ಕೆ ಬಾರ್ಡರ್ ಬಳಿ ಬಂಡೆಗಲ್ಲಿಗೆ ಬಡಿದು 9 ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದಾರೆ.

ಉಡುಪಿ-ಚಿಕ್ಕಮಗಳೂರು ಘಾಟಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಪಕ್ಕದ ಗುಡ್ಡಕ್ಕೆ ಬಡಿದಿದೆ. ಎಸ್.ಕೆ ಬಾರ್ಡರ್ ಸಮೀಪದ ಅಬ್ಬಾಸ್ ಕಟ್ಟಿಂಗ್ ಬಳಿ ಈ ದುರಂತ ಸಂಭವಿಸಿದೆ.

ಪ್ರವಾಸಕ್ಕಾಗಿ ಬಂದಿದ್ದ ಸುಮಾರು ಮೂವತ್ತೈದು ಜನರು ಬಸ್​ನಲ್ಲಿದ್ದರು. ಅಪಘಾತದ ತೀವ್ರತೆಗೆ ಬಸ್ಸಿನ ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಡ್ರೈವರ್ ಸಹಿತ ಆತನ ಹಿಂದಿದ್ದ 9 ಜನರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಇನ್ನೂ ಹಲವರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯರು ಮತ್ತು ಪೊಲೀಸರು ಗಾಯಗಳು ಗಳನ್ನು ಆಸ್ಪತ್ರೆಗೆ ಸಾಗಿಸಿ ಬಸ್ಸನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net