

ಮಡಿಕೇರಿ: ಮಡಿಕೇರಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಪ್ರಪಾತದತ್ತ ಸಾಗುತ್ತಿತ್ತು. 200 ಅಡಿ ಅಳದ ಪ್ರಪಾತಕ್ಕೆ ಬಿದ್ದು ಅನಾಹುತ ಘಟಿಸುವುದು ಕೂದಲೆಳೆಯಲ್ಲಿ ತಪ್ಪಿದೆ.
ರಸ್ತೆ ದಾಟಿ ಪ್ರತಾಪದ ಹಾದಿಯಲ್ಲಿ ಅಚ್ಚರಿಕರ ರೀತಿ ನಿಲುಗಡೆ ಯಾದ ಬಸ್ ಅನ್ನು ಸಾರ್ವಜನಿಕರು ಭಯ ಮತ್ತು ಕುತೂಹಲದಿಂದ ವೀಕ್ಷಿಸುತ್ತಿದ್ದರು.
ಅತಿ ವೇಗದಿಂದ ಚಾಲಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ, ಬಸ್ ರಸ್ತೆಯಿಂದ ಹೊರ ಹೋಗುವಂತಾಯಿತು. ಬಸ್ ಚಾಲಕ ಹಾಗೂ ಮುಂಭಾಗದಲ್ಲಿ ಆಸೀನರಾಗಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ತಕ್ಷಣ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಇಳಿಜಾರಿನಲ್ಲಿ ಅತಿ ವೇಗದಿಂದ ಬರುವ ರಸ್ತೆಗಳು ಅಪಘಾತಕ್ಕೆ ಸಿಲುಕಿ, ಸಾವು- ನೋವು ಸಂಭವಿಸುವುದು ಸಾಮಾನ್ಯವಾಗಿದೆ. ಇನ್ನೂ ಸ್ವಲ್ಪ ಮುಂದೆ ಬಸ್ ಚಲಿಸಿದ್ದಲ್ಲಿ ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಯೊಂದಿಗೆ ಆತಂಕ ವ್ಯಕ್ತ ಪಡಿಸಿದ್ದಾರೆ.