

ಕಾರವಾರ: ಖಾಸಗಿ ಬಸ್ ಪಲ್ಟಿಯಾಗಿ 10 ಜನರು ಗಾಯಗೊಂಡ ಘಟನೆ ಮಂಗಳವಾರ ಬೆಳಗಿನಜಾವ ನಡೆದಿದೆ.
ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಸೀಬರ್ಡ್ ಬಸ್ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಂಕೋಲಾ ವಜ್ರಳ್ಳಿ ಬಳಿ ಚಾಲಕನ ನಿಯಂತ್ರಷ ತಪ್ಪಿ ಪಲ್ಟಿಯಾಗಿದೆ.
ಬಸ್ ನಲ್ಲಿದ್ದ 10 ಜನರು ಗಾಯಗೊಂಡಿದ್ದು ಅವರನ್ನು ಯಲ್ಲಾಪುರ, ರಾಮನಗುಳಿ ಹಾಗೂ ಗುಳ್ಳಾಪುರದ ನಾಲ್ಕು 108 ಆಂಬುಲೆನ್ಸ್ ಗಳು ತಕ್ಷಣ ತೆರಳಿ ಗಾಯಾಳುಗಳನ್ನು ಅಂಕೋಲಾ ಆಸ್ಪತ್ರೆಗೆ ಸಾಗಿಸಿದವು. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.