ಹಳ್ಳಕ್ಕಿಳಿದ ಖಾಸಗಿ ಶಾಲೆ ಬಸ್: ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

bus accident mandya
Published on

ಮಂಡ್ಯ: ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಗುರುವಾರ ಮಕ್ಕಳಿದ್ದ ಖಾಸಗಿ ಶಾಲೆಯ ಬಸ್ ಹಳ್ಳಕ್ಕೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.

ಶಾಲೆಗೆಂದು ಮಕ್ಕಳನ್ನು ಹತ್ತಿಸಿಕೊಂಡು ಗ್ರಾಮದ ಹೊರವಲಯದಲ್ಲಿ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಗ್ರಾಮದಿಂದ ಅಣತಿ ದೂರದಲ್ಲಿ ದೊಡ್ಡ ಹಳ್ಳವಿದ್ದು, ಈ ರಸ್ತೆಯ ಮಧ್ಯೆ ಪೈಪ್‌ಗಳನ್ನು ಹಾಕಿ ಮಣ್ಣಿನಿಂದ ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಸಂಚರಿಸಿದಾಗ ಪೈಪ್ ಹಾಗೂ ಚಪ್ಪಡಿ ಕಲ್ಲು ಸಮೇತ ಹಿಂಬದಿ ಚಕ್ರ ಸಿಲುಕಿ ವಾಲಿಕೊಂಡಿದೆ. ಇದರಿಂದಾಗಿ ಮಕ್ಕಳು ಚೀರಾಡಿದ್ದಾರೆ, ಚಾಲಕ ಕೃಷ್ಣ ಸಮಯ ಪ್ರಜ್ಞೆ ಮೆರೆದು ತಕ್ಷಣ ಬಸ್ ನಿಲ್ಲಿಸಿ ಮಕ್ಕಳನ್ನು ಹೊರಗಡೆ ಇಳಿಸಿಕೊಂಡಿದ್ದಾರೆ.

ಈ ರಸ್ತೆಯು ಹಿಂದಿನಿಂದಲೂ ಸಮಸ್ಯೆಯಿಂದ ಕೂಡಿದೆ. ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಮಳೆಗಾಲದಲ್ಲಿಯಂತೂ ವಾಹನ ಚಾಲಕರು ಜೀವ ಕೈಯಲ್ಲಿಡಿದು ಹೋಗುವ ದುಸ್ಥಿತಿ ಇದೆ. ಸೇತುವೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಜನಪ್ರತಿನಿಧಿಗಳಿಗೂ ವಿಷಯ ತಿಳಿಸಿದರೂ ಕ್ರಮವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net