ರೈಲ್ವೆ ಗೇಟ್ ಗೆ ಬಸ್ ಡಿಕ್ಕಿ, 20ಕ್ಕು ಹೆಚ್ಚು ಪ್ರಯಾಣಿಕರಿಗೆ ಗಾಯ

bus-accident-koppal-passangers-injured-admit-hospital-railway-gate
BUS ACCIDENT SPOT
Published on

ಕೊಪ್ಪಳ: ನಗರದ ಹೊರ ವಲಯದ ಕಿಮ್ಸ್ ಬಳಿ ರೈಲ್ವೆ ಗೇಟ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಂಗಾವತಿ ಘಟಕದ ವಾಹನ ಇದಾಗಿದ್ದು, ಗಂಗಾವತಿಯಿಂದ ಕೊಪ್ಪಳಕ್ಕೆ ಬರುವಾಗ ಘಟನೆ ನಡೆದಿದೆ. ರೈಲ್ವೆ ಗೇಟ್ ದಾಟುವಾಗ ಹಳಿ ಮುಂಭಾಗದಲ್ಲಿ ಹಾಕಿರುವ ಕಬ್ಬಿಣದ ತಡಗೋಡೆಗೆ ಬಸ್ ಡಿಕ್ಕಿ ಹೊಡೆದಿದೆ.

ಗುದ್ದಿದ ರಭಸಕ್ಕೆ ಬಸ್ ಕೆಲ ಮೀಟರ್ ಹಿಂದೆ ಸರಿದು ತಗ್ಗಿನಲ್ಲಿ ಸಿಲುಕಿಕೊಂಡಿದೆ. ಬಸ್ ಮುಂಭಾಗದ ಗಾಜು ಪುಡಿಯಾಗಿದೆ. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.

ತಕ್ಷಣ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಯಾವುದೇ ಸಾವು ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net