ಪಾಣತ್ತೂರು ಬಳಿ ರಸ್ತೆ ಅಪಘಾತ, ಬಾಲಕ ಸಹಿತ ಆರುಮಂದಿ ದುರ್ಮರಣ

accident
Published on

ಸುಳ್ಯ: ಮದುವೆ ದಿಬ್ಬಣವಿದ್ದ ಬಸ್ ಪಾಣತ್ತೂರು ಬಳಿ ಪಲ್ಟಿಯಾಗಿದ್ದು ಘಟನೆಯಲ್ಲಿ ಬಾಲಕ ಸಹಿತ ಆರು ಮಂದಿ ಮೃತಪಟ್ಟಿದ್ದಾರೆ.

ಪುತ್ತೂರು ಕಡೆಯಿಂದ ಸುಳ್ಯ ಅಲೆಟ್ಟಿ ಮೂಲಕ ಪಾಣತ್ತೂರು ಕರಿಕೆ ಕಡೆಗೆ ಹೋಗುತ್ತಿದೆ ಮದುವೆ ದಿಬ್ಬಣದ ಖಾಸಗಿ ಬಸ್ ಪಾಣತ್ತೂರು ಬಳಿ ಪಲ್ಟಿಯಾಗಿದೆ.

ಕೊಡಗು ಜಿಲ್ಲೆಯ ಚೆತ್ತುಕಯ ಎಂಬಲ್ಲಿ ವರನ ಮನೆಯಲ್ಲಿ ಇದ್ದ ಮದುವೆ ಸಮಾರಂಭಕ್ಕೆ ವಧುವಿನ ಊರಾದ ಈಶ್ವರಮಂಗಲದಿಂದ ವಧುವಿನ ಮನೆಯವರು ಖಾಸಗಿ ಬಸ್‌ನಲ್ಲಿ ದಿಬ್ಬಣ ತೆರಳುತ್ತಿದ್ದರು. ಬಸ್‌ನಲ್ಲಿ 60ಕ್ಕೂ ಹೆಚ್ಚು ಮಂದಿ ಇದ್ದರೆನ್ನಲಾಗಿದೆ.

ಕಲ್ಲಪಳ್ಳಿ- ಪಾಣತ್ತೂರು ಮಧ್ಯೆ ಪೆರಿಯಾರಂ ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಿದ್ದಿದೆ. ಘಟನೆಯಲ್ಲಿ ಬಾಲಕನ ಸಹಿತ ಆರು ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಅರ್ತಮೂಲೆ ನಾರಾಯಣ ನಾಯ್ಕರ ಪುತ್ರ ಶ್ರೇಯಸ್(13), ಸುಳ್ಯದ ರವಿಚಂದ್ರ(40), ಅವರ ಪತ್ನಿ ಜಯಲಕ್ಷ್ಮಿ(39), ಬೆಳ್ನಾಡ್ ನಿವಾಸಿ ರಾಜೇಶ್(45), ಪುತ್ತೂರಿನ ಸುಮತಿ ಹಾಗೂ ಆದರ್ಶ ಮೃತಪಟ್ಟವರು ಗಾಯಾಳುಗಳನ್ನು ಪಾಣತ್ತೂರು, ಪೂಡಂಕಲ್ಲು, ಕಾಞಂಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net