ಕೆರೆ ಏರಿಯಿಂದ ಉರುಳಿದ ಶಾಲಾ ಬಸ್

bus accident
Published on

ದೊಡ್ಡಬಳ್ಳಾಪುರ: ತಾಲೂಕಿನ ತಿರುಮಗೊಂಡನಹಳ್ಳಿ-ಗಂಗಸಂದ್ರ ನಡುವಿನ ಕೆರೆ ಏರಿ ಮೇಲಿಂದ ಶುಕ್ರವಾರ ಸಂಜೆ ಪಾಲಜೋಗಹಳ್ಳಿ ಸಮೀಪದ ಬಿ.ಎಚ್.ಪಬ್ಲಿಕ್ ಶಾಲೆ ಬಸ್ ಉರುಳಿ ಬಿದ್ದು, ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ. ಚಾಲಕನ ಬೇಜವಾಬ್ದಾರಿಯಿಂದ ಬಸ್ ಉರುಳಿ ಬಿದ್ದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಬಸ್‌ನಲ್ಲಿ 5 ವಿದ್ಯಾರ್ಥಿಗಳಿದ್ದು, ಅದರಲ್ಲಿ 2ನೇ ತರಗತಿಯ ನಂದನ್‌ಗೆ ಗಾಯವಾಗಿದೆ. ಉಳಿದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗಳಿಗೆ ಕಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net