ಪ್ರಯಾಣಿಕರಿಂದ ತುಂಬಿದ್ದ ಬಸ್ಸು ರಸ್ತೆ ಪಕ್ಕದ ಇಳಿಜಾರಿಗೆ

Bus accident
Published on

ಹೊನ್ನಾವರ: ಇಕ್ಕಟ್ಟಾದ ರಸ್ತೆಯಲ್ಲಿ ಪ್ರಯಾಣಿಕರಿಂದ ತುಂಬಿದ್ದ ಕೆಎಸ್ಆರ್ಟಿಸಿ ಬಸ್ಸು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಇಳಿಜಾರಿಗೆ ಚಲಿಸಿದ ಘಟನೆ ತಾಲೂಕಿನ ಹಾಡಗೇರಿ ಹಂದಿಮುಲ್ಲೆಯಲ್ಲಿ ನಡೆದಿದೆ.
ಹೊಸಗೋಡದಿಂದ ಹೊನ್ನಾವರಕ್ಕೆ ಸಾಗುತ್ತಿದ್ದ ಬಸ್ಸು ಶುಕ್ರವಾರ ಬೆಳಿಗ್ಗೆ ಹಂದಿಮುಲ್ಲೆ ಬಳಿ ಎದುರು ಬರುತ್ತಿದ್ದ ರಿಕ್ಷಾಗೆ ಜಾಗ ನೀಡಲು ಹೋದಾಗ ಈ ಘಟನೆ ನಡೆದಿದೆ.
ಬೆಳಗ್ಗೆ ಸಮಯವಾಗಿದ್ದರಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರಿಂದ ಭರ್ತಿಯಾಗಿದ್ದ ಬಸ್ಸು ನಿಯಂತ್ರಣ ತಪ್ಪಿ ತಗ್ಗುಪ್ರದೇಶಕ್ಕೆ ಇಳಿದಿದೆ. ಬಸ್ಸು ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಚಾಲಕ ಇಳಿಜಾರಿನಲ್ಲಿ ಬಸ್ಸು ನಿಲ್ಲಿಸಲು ಯಶಸ್ವಿಯಾಗಿದ್ದು, ಚಾಲಕನ ಜಾಗರೂಕತೆಯಿಂದ ದೊಡ್ಡ ಅಪಾಯ ತಪ್ಪಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ಕನ್ನಡಿಗರ ಮೇಲೆ‌ ದೌರ್ಜನ್ಯ- ಕರವೇ ಪ್ರತಿಭಟನೆ
ಗ್ರಾಮೀಣ ಭಾಗದಲ್ಲಿ ರಸ್ತೆಗಳು ತಿರುವಿನಲ್ಲಿ ಇಕ್ಕಟ್ಟಾಗಿರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net