

ಮಡಿಕೇರಿ
ತಲಕಾವೇರಿಯಲ್ಲಿ ಶುಕ್ರವಾರವಷ್ಟೇ ತೀರ್ಥೋದ್ಭವ ಸಂಭವಿಸಿದ್ದು ಇನ್ನು ಒಂದು ತಿಂಗಳ ಕಾಲ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಜಾತ್ರೆಯ ಸಂಭ್ರಮ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೂಡ ಭೇಟಿ ಕೊಡುತ್ತಾರೆ. ಜಾತ್ರೆ ಹಿನ್ನೆಲೆಯಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನು ಬಿಡಲಾಗಿತ್ತು. ಆದರೆ ಶನಿವಾರ ಈ ಬಸ್‌ಗಳು ಇರಲಿಲ್ಲ. ಬೆಳಗ್ಗೆ 8.40 ಮತ್ತು 11 ಗಂಟೆಗೆ ಮಾತ್ರ 2 ಬಸ್‌ಗಳು ಭಾಗಮಂಡಲದಿAದ ತಲಕಾವೇರಿಗೆ ಸಂಚರಿಸಿದವು. ನಂತರ ಯಾವುದೇ ಬಸ್‌ಗಳ ವ್ಯವಸ್ಥೆ ಇಲ್ಲದೆ ತಲಕಾವೇರಿಗೆ ತೆರಳಬೇಕಾದ ಭಕ್ತರು ಪರದಾಡಬೇಕಾಯಿತು.
ಸ್ವಂತ ವಾಹನಗಳಲ್ಲಿ ಬಂದವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಬಸ್‌ಗಳಲ್ಲಿ ಬಂದವರು ಮಡಿಕೇರಿಯಿಂದ ಭಾಗಮಂಡಲಕ್ಕೆ 38 ಕಿಮೀಗೆ 53 ರೂ. ಖರ್ಚು ಮಾಡಿದವರು ಭಾಗಮಂಡಲದಿAದ ತಲಕಾವೇರಿಗೆ 8 ಕಿಮೀ ಹೋಗಲು 350-400 ರೂ. ಆಟೋಗಳಿಗೆ ಕೊಡಬೇಕಾದ ಅನಿವಾರ್ಯತೆ ಎದುರಿಸಬೇಕಾಯಿತು. ಕೆಲವರು ಇಷ್ಟು ಹಣ ಭರಿಸಲಾಗದೇ ಭಾಗಮಂಡಲದಿAದಲೇ ವಾಪಸ್ ತೆರಳಿದ ಘಟನೆಯೂ ನಡೆಯಿತು.
ಇಲ್ಲಿ ಬಸ್‌ಗಳ ಸಮಸ್ಯೆ ಮೊದಲಿನಿಂದಲೂ ಇದ್ದು ಜಾತ್ರೆ ಸಮಯದಲ್ಲಾದರೂ ಸೂಕ್ತ ವ್ಯವಸ್ಥೆ ಮಾಡದ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಖಾಸಗಿ ಬಸ್‌ಗಳಿಗೆ ಪರ್ಮಿಟ್ ಇದ್ದರೂ ಈ ಮಾರ್ಗದಲ್ಲಿ ಸಂಚರಿಸುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಭಕ್ತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕನಿಷ್ಠ ಗಂಟೆಗೆ ಒಂದಾದರೂ ಬಸ್‌ಗಳನ್ನು ಭಾಗಮಂಡಲ ಮತ್ತು ತಲಕಾವೇರಿ ಮಧ್ಯೆ ಓಡಿಸುವಂತೆ ಒತ್ತಾಯ ಕೇಳಿಬರುತ್ತಿದೆ.