ಪಂತ ಬಾಳೇಕುಂದ್ರಿ ಜಾತ್ರೆಗೆ ಹೆಚ್ಚುವರಿ ಬಸ್

Published on

ಬೆಳಗಾವಿ: ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಅ.8ರಿಂದ 10ರವರೆಗೆ ಜರುಗುವ ಪಂತ ಮಹಾರಾಜರ ಜಾತ್ರೆ ಪ್ರಯುಕ್ತ ಜನರ ಅನುಕೂಲಕ್ಕಾಗಿ ಹೆಚ್ಚುವರಿ ವಿಶೇಷ ಬಸ್‌ಗಳನ್ನು ನಗರ ಬಸ್ ನಿಲ್ದಾಣದಿಂದ ಹಾಗೂ ಪಂತ ಬಾಳೇಕುಂದ್ರಿಯಿಂದ ನಗರಕ್ಕೆ ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಇದಕ್ಕಾಗಿ ಬೆಳಗಾವಿ ಬಸ್ ನಿಲ್ದಾಣ ಹಾಗೂ ಪಂತ ಬಾಳೇಕುಂದ್ರಿಯಲ್ಲಿಯೂ ವಿಶೇಷ ಪ್ಲಾಟ್‌ಫಾರ್ಮ್ ಮಾಡಿ, ಸಿಬ್ಬಂದಿ ನಿಯೋಜಿಸಲಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net