ಸಿಡಿಲು ಬಡಿದು ಸಾವು

Death j
Published on

ಕೊಕಟನೂರ: ಅಥಣಿ ತಾಲೂಕಿನ ಸವದಿ ದರ್ಗಾ ಗ್ರಾಮದ ಸಿಡಿಲು ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಗ್ರಾಮದ ಬಂದೇನಮಾಜ್ ಜಿನ್ನದಸಾಬ್ ಮುಲ್ಲಾ (41) ಮೃತಪಟ್ಟ ವ್ಯಕ್ತಿ.

ಸಂಜೆ ವೇಳೆ ಜಾನುವಾರುಗಳಿಗೆ ಕೃಷ್ಣಾ ನದಿ ದಡದಲ್ಲಿರುವ ತಮ್ಮ ಗದ್ದೆಯಲ್ಲಿರುವ ಮೇವು ತರಲು ಹೋದಾಗ ದುರ್ಘಟನೆ ಸಂಭವಿಸಿದೆ. ಕತ್ತಲಾದರೂ ಮರಳಿ ಮನೆಗೆ ಬರದಿದ್ದಾಗ ಕುಟುಂಬಸ್ಥರು ಹುಡುಕಾಡಿದಾಗ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತರಿಗೆ ತಂದೆ, ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ಥಳಕ್ಕೆ ಎಎಸ್‌ಐ ಎಸ್.ಪಿ. ಪಾಟೀಲ, ಲಕ್ಷ್ಮಣ ಅಜ್ಜಣಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net