ಸುಟ್ಟು ಭಸ್ಮವಾದ ಜೋಳದ ಕಡ್ಡಿ ಮೆದೆ

Screenshot_20241129-182731
ಕೊಡಸೋಗೆ ಗ್ರಾಮದಲ್ಲಿ ಜೋಳದಕಡ್ಡಿ ಮೆದೆ ಸುಟ್ಟು ಭಸ್ಮವಾಗಿರುವುದು.
Published on

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ದುಷ್ಕರ್ಮಿಗಳು ಇಟ್ಟ ಬೆಂಕಿಗೆ ಜೋಳದ ಕಡ್ಡಿ ಮೆದೆ ಸಂಪೂರ್ಣ ಭಸ್ಮವಾಗಿದೆ.

ಗ್ರಾಮದ ಪ್ರಭುಸ್ವಾಮಿ ಎಂಬುವರ ಜಮೀನಿನಲ್ಲಿ ಹಾಕಿದ್ದ ಮೆದೆಗೆ ಶುಕ್ರವಾರ ಸಂಜೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಗ್ರಾಮಸ್ಥರು ಬಂದು ನೋಡುವಷ್ಟರಲ್ಲಿ ಮೆದೆ ಸಂಪೂರ್ಣ ಭಸ್ಮವಾಗಿತ್ತು. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net