ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ರಾಗಿ ಫಸಲು ಭಸ್ಮ

16 NMG 01 (2)
Published on

ನಾಗಮಂಗಲ: ತಾಲೂಕಿನ ದೊಡ್ಡಜಟಕ ಗ್ರಾಮದ ಬಳಿ ಒಕ್ಕಣೆ ಮಾಡಲು ರಸ್ತೆಗೆ ಹಾಕಿದ್ದ ರಾಗಿ ಹುಲ್ಲಿಗೆ ಕಿಡಿಗೇಡಿಗಳು ಮಂಗಳವಾರ ರಾತ್ರಿ ಬೆಂಕಿ ಹಾಕಿದ ಪರಿಣಾಮ ಫಸಲು ಭಸ್ಮವಾಗಿದೆ.

ಗ್ರಾಮದ ರೈತರಾದ ಕಿರಣ್ ಮತ್ತು ಶಶಿ ಅವರಿಗೆ ಸೇರಿದ ರಾಗಿ ಫಸಲು ಬೆಂಕಿಗಾಹುತಿಯಾಗಿದೆ. ತಮ್ಮ ಜಮೀನು ಪಕ್ಕದ ಡಾಂಬಾರು ರಸ್ತೆಗೆ ರಾಗಿ ಹುಲ್ಲನ್ನು ಒಕ್ಕಣೆಗೆ ಹಾಕಿದ್ದ ಸಂದರ್ಭ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಕಿರಣ್ ಅವರಿಗೆ ಸೇರಿದ ರಾಗಿ ಹುಲ್ಲು ಸಂಪೂರ್ಣ ಸುಟ್ಟುಹೋಗಿದೆ. ಶಶಿ ಅವರಿಗೆ ಸೇರಿದ ರಾಗಿ ಹುಲ್ಲು ಅರ್ಧ ಸುಟ್ಟುಹೋಗಿದ್ದು ಉಪಯೋಗಕ್ಕೆ ಬಾರದಂತೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net