ಚಿನ್ನಾಭರಣ ಕಳ್ಳತನ ಇಬ್ಬರ ಬಂಧನ

Thief
Published on

ಬೆಳಗಾವಿ: ಚಿನ್ನಾಭರಣ ಕದಿಯುವವ ಹಾಗೂ ಕಳ್ಳತನ ಮಾಡಿ ತಂದ ಚಿನ್ನ ಖರೀದಿಸುತ್ತಿದ್ದವನನ್ನು ಸೋಮವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2,65,300 ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ವಡಗಾಂವಿಯ ನಿವಾಸಿ ಪರಶುರಾಮ ದಂಡಗಲ್ಲ ಹಾಗೂ ಈತನಿಗೆ ಸಹಾಯ ಮಾಡಿದ ಆರೋಪದ ಮೇಲೆ ಖಾಸಬಾಗದ ಸಾಯಿನಾಥ ಜ್ಯುವೆಲರಿ ಮಾಲೀಕ ವಿನಯ ಅಣ್ವೇಕರ ಎಂಬುವರನ್ನು ಬಂಧಿಸಲಾಗಿದೆ.ಬಂಧಿತ ಕಳ್ಳ, ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಸುರೇಶ ಪಿ.ಶಿಂಗಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕಳ್ಳತನಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡ್ ಸೇರಿ ಇತರ ವಸ್ತು ವಶಕ್ಕೆ ಪಡೆಯಲಾಗಿದೆ. ಕಳ್ಳತನ ಮಾಡಿದ ಎಲ್ಲ ಚಿನ್ನಾಭರಣಗಳನ್ನೂ ಬಂಗಾರದ ಅಂಗಡಿ ಮಾಲೀಕ ವಿನಯ ಎಂಬುವರಿಗೆ ಪರಶುರಾಮ ದಂಡಗಲ್ಲ ನೀಡುತ್ತಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ 79 ಗ್ರಾಂ ಬಂಗಾರ ಹಾಗೂ 135 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net