ಬೀಗ ಹಾಕಿದ 3 ಮನೆಗಳಲ್ಲಿ ಕಳವು

Theft in home
Published on

ರಟ್ಟಿಹಳ್ಳಿ: ಪಟ್ಟಣದ ಕೋಟೆ ಭಾಗದ 3 ಮನೆಯ ಬೀಗ ಮುರಿದು ಚಿನ್ನ, ಬೆಳ್ಳಿ, ನಗದು ದೋಚಿರುವ ಘಟನೆ ಸೋಮವಾರ ರಾತ್ರಿ ಜರುಗಿದೆ.

ಕೋಟೆ ಭಾಗದ ಉಪ್ಪಾರ ಓಣಿಯಲ್ಲಿ ಅನಿತಾ ನಿಜಲಿಂಗಪ್ಪ ಉಪ್ಪಾರ ಎಂಬುವರ ಮನೆಯಲ್ಲಿ 13,500 ರೂಪಾಯಿ ಮೌಲ್ದಯ ಬೆಳ್ಳಿಯ ಆಭರಣ ಮತ್ತು ಕರಬಸಪ್ಪ ಈರಪ್ಪ ಗುಬ್ಬಿ ಎನ್ನುವರ ಮನೆಯಲ್ಲಿ 1 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಹಾಗೂ 45 ಸಾವಿರ ನಗದು ಕಳವು ಮಾಡಲಾಗಿದೆ. ಇದೇ ಓಣಿಯಲ್ಲಿ ಇರುವ ಜಯತೀರ್ಥ ಅಧ್ಯಾಪಕ ಅವರ ಮನೆಯ ಬೀಗ ಮುರಿದು ಮನೆಯಲ್ಲಿನ ತಿಜೋರಿ ಒಡೆದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚಗಾರರೊಂದಿಗೆ ಭೇಟಿ ನೀಡಿದ ಡಿವೈಎಸ್ಪಿ ಗಿರೀಶ ಭೋಜಣ್ಣನವರ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಐ ಜಗದೀಶ ಜಿ. ಭೇಟಿ ನೀಡಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net