ಮನೆ ಬೀಗ ಮುರಿದು ಕಳ್ಳತನ

house-Theft
Published on

ಪಡುಬಿದ್ರಿ: ಎರಡು ತಿಂಗಳ ಹಿಂದೆ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ದುಬೈಗೆ ತೆರಳಿರುವ ಕಾಪು ಪಡು ಕೆ.ಎಚ್.ಉಸ್ಮಾನ್ ರವರ ಮನೆ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಸಹಿತ ಇತರ ಸೊತ್ತುಗಳನ್ನು ಕಳವು ಮಾಡಿದ ಘಟನೆ ಗುರುವಾರ ನಡೆದಿದೆ. ಕಳವು ನಡೆದ ಮನೆ ಬಳಿಯ ಸಹೋದರ ಕೆ.ಎಚ್.ಅಬೂಬಕ್ಕರ್ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net