ಮೈಸೂರು: ಪ್ರತ್ಯೇಕ ಪ್ರಕರಣದಲ್ಲಿ ಎರಡು ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, 27 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ ದೋಚಿದ್ದಾರೆ.
ವಿದ್ಯಾರಣ್ಯಪುರಂನ ಶಿಕ್ಷಕಿ ಆರ್.ವೀಣಾ ಅವರು ಮೇ 3 ರಂದು ಮಂಡ್ಯಕ್ಕೆ ತೆರಳಿದ್ದು, ಮನೆಯ ಬಾಗಿಲಿನ ಕಿಟಕಿಯ ಗಾಜನ್ನು ಒಡೆದು ಬಾಗಿಲನ್ನು ತೆರೆದಿರುವ ಕಳ್ಳರು, ಮನೆಯಲ್ಲಿ ಇದ್ದ ನಗದು, ಚಿನ್ನಾಭರಣ ದೋಚಿದ್ದಾರೆ. ವಾಪಸ್ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಸಿನಗರದ ನಂದಿನಿ ಅವರು ಮೇ 8 ರಂದು ಮದ್ದೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಮನೆಯ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು, 2.4 ಲಕ್ಷ ರೂ. ವೌಲ್ಯದ ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ. ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.