6.33 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದವನ ಬಂಧನ

Thief
Published on

ಅಥಣಿ: ತಾಲೂಕಿನ ವಿವಿಧ ಕಡೆ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಠಾಣೆ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿ, 6.33 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿ ಮಾಡಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಲವಂಗಿ ಗ್ರಾಮದ ನರಸಿಂಗ್ ಅಂಬಾದಾಸ ಸಾಖರೆ (45) ಬಂಧಿತ. ಈತನ ಮೇಲೆ ಮಹಾರಾಷ್ಟ್ರದ ಇಚಲಕರಂಜಿ, ಮುಂದ್ರೂಪ್, ಸೊಲ್ಲಾಪುರ ಹಾಗೂ ಕರ್ನಾಟಕದ ಕಲಬುರಗಿ, ಗದಗ, ವಿಜಯಪುರ ಪೊಲೀಸ್ ಠಾಣೆಗಳಲ್ಲಿ ಮನೆಗಳ್ಳತನದ ಪ್ರಕರಣಗಳು ದಾಖಲಾಗಿವೆ.

ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಸ್.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಅಪರಾಧ ವಿಭಾಗದ ಪಿಎಸ್‌ಐ ಎಂ.ಡಿ.ಘೋರಿ, ಎಸ್‌ಐ ವಿ.ಜಿ.ಆರೇರ, ಎಂ.ಬಿ.ದೊಡಮನಿ, ಎ.ಎ.ಈರಕರ, ಪಿ.ಬಿ.ನಾಯಿಕ, ಜಿ.ಎಚ್.ಹೊನವಾಡ, ಎ.ಟಿ.ಕೊಳವಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net