ಅಧಿಕಾರಿಗಳ ಮಧ್ಯಸ್ಥಿಕೆ, ಗರ್ಭಿಣಿ ಅಂತ್ಯಸಂಸ್ಕಾರ

Death 5 May 20
Published on

ಬೆಳಗಾವಿ: ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯರ ಜೋಡಿ ಕೊಲೆ ಪ್ರಕರಣದಲ್ಲಿ ಹತ್ಯೆಯಾಗಿದ್ದ ಗರ್ಭೀಣಿಯ ಅಂತ್ಯಕ್ರಿಯೆಗೆ ಕಾಳೇನಟ್ಟಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಭಾನುವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕಾಳೇನಟ್ಟಿಯ ಗಂಗಪ್ಪ ಎಂಬುವರ ಪತ್ನಿ ರೋಹಿಣಿ ಕಳೆದ ವಾರ ಮಚ್ಛೆ ಗ್ರಾಮದಲ್ಲಿರುವ ಸಹೋದರ ಸಂಬಂಧಿ ಮನೆಗೆ ತೆರಳಿದ್ದಳು.

ಅಲ್ಲಿ ಶನಿವಾರ ಸಂಜೆ ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಣ್ಣಿಗೆ ಖಾರದಪುಡಿ ಎರಚಿ ರೋಹಿಣಿ ಮತ್ತು ಆಕೆಯ ಸಂಬಂಧಿ ರಾಜಶ್ರೀಯನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಕೊಲೆಯಾದ ಮಹಿಳೆಯರಿಬ್ಬರೂ ಕಾಳೇನಟ್ಟಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಗಂಗಪ್ಪ ಮೂಲತಃ ಬೇರೆ ಊರಿನವರೆಂದು ಆತನ ಪತ್ನಿ ಅಂತ್ಯಕ್ರಿಯೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net