

ಕಳಸ: ದುರ್ಗಾ ಮಂಟಪದಲ್ಲಿ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿಯಿಂದ ನಡೆಯುತ್ತಿರುವ 36ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಮಹೋತ್ಸವಕ್ಕೆ ಸಂಸೆ ಮುಸ್ಲಿಮರು ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಿ ಸೌಹಾರ್ದ ಮೆರೆದಿದ್ದಾರೆ.
ಅಕ್ಕಿ, ಬೇಳೆ ಕಾಳು, ಎಣ್ಣೆ, ಬೆಲ್ಲ, ಸಕ್ಕರೆ, ಬಾಳೆಗೊನೆ ಇತ್ಯಾದಿ ವಸ್ತುಗಳನ್ನು ತಂದು ಸಮರ್ಪಿಸಿದರು. ಮೆರವಣಿಗೆಯಲ್ಲಿ ಬಂದ ಮುಸ್ಲಿಮರನ್ನು ಸಮಿತಿಯಿಂದ ಬರಮಾಡಿಕೊಂಡು ಪ್ರಸಾದ ನೀಡಲಾಯಿತು. ಸಂಸೆ ರಹಮಾನಿಯ ಜುಮ್ಮಾ ಮಸೀದಿ ಅಧ್ಯಕ್ಷ ಬದ್ರುದ್ದೀನ್, ಕಾರ್ಯದರ್ಶಿ ಹನ್ೀ, ಖಜಾಂಚಿ ಅಜೀಜ್, ಸದಸ್ಯರಾದ ಇಬ್ರಾಹಿಂ, ಎ.ಕೆ. ರಫೀಕ್, ಕೆ.ಎಂ.ರಜಾಕ್, ಮೊಹಿದ್ದೀನ್ ಭಾಪು, ಶರ್ೀ, ಬಿ.ಎಂ.ರಫೀಕ್ ಇತರರಿದ್ದರು.