ಬಂಟವಾಳ ಬಂಟರ ಸಂಘದಿಂದ ಬೊಲ್ಪುದ ಐಸಿರಿ

mng-15nov-bunts deepavali
Published on





ಮಂಗಳೂರು : ದೇಶ ವಿದೇಶಗಳಲ್ಲಿ ಬಂಟರ ಕೊಡುಗೆ ಅನನ್ಯವಾಗಿದೆ. ಕೃಷಿ ಪರಂಪರೆಯಿಂದ ಬಂದ ಬಂಟ ಸಮುದಾಯ ಪವಿತ್ರವಾದ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ ಎಂದು ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ ಹೇಳಿದರು.
ಬಂಟರ ಸಂಘ ಬಂಟವಾಳ ತಾಲೂಕು ಯುವ ವಿಭಾಗದ ವತಿಯಿಂದ ಬಂಟ್ವಾಳ ಬಂಟರ ಭವನದಲ್ಲಿ ದೀಪಾವಳಿ ಸಂಭ್ರಮದ ಪ್ರಯುಕ್ತ ನಡೆದ ಬೊಲ್ಪುದ ಐಸಿರಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಬಂಟ್ವಾಳ ಬಂಟರ ಯುವ ವಿಭಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸಿ, ಸಂಪ್ರದಾಯದಂತೆ ಕಾರ್ಯಕ್ರಮ ನಡೆಸಿದ್ದಾರೆ ಎಂದು ಶ್ಲಾಘಿಸಿದರು.
ದ.ಕ.ಸಂಸದ , ಶಾಸಕರಾದ ರಾಜೇಶ್ ನಾಯ್ಕ, ಅಶೋಕ್‌ಕುಮಾರ್ ರೈ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ ಸದಾನಂದ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಉದಯ ಶೆಟ್ಟಿ ಮುನಿಯಾಲು, ನಗ್ರಿಗುತ್ತು ವಿವೇಕ್ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ಜಗನ್ನಾಥ ಚೌಟ, ಡಾ. ಪ್ರಶಾಂತ್ ಮಾರ್ಲ, ಲೋಕೇಶ್ ಶೆಟ್ಟಿ ಕುಳ, ರಂಜನ್ ಶೆಟ್ಟಿ ಅರಳ, ಪ್ರತಿಭಾ ರೈ, ರಮಾ ಭಂಡರಿ, ಗೋಕುಲ್ ಭಂಡಾರಿ, ಕರುಣ್ ಶೆಟ್ಟಿ, ದೀಪಕ್ ರೈ, ಶುಭಕರ್ ಶೆಟ್ಟಿ, ವಿಕ್ರಮ್ ಶೆಟ್ಟಿ ಉಪಸ್ಥಿತರಿದ್ದರು.
ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು. ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ ಸ್ವಾಗತಿಸಿದರು. ಭವಿಷ್ ಶೆಟ್ಟಿ ಕೊಡಿಬೆಟ್ಟು ಸನ್ಮಾನಪತ್ರ ವಾಚಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಮೂಹಿಕ ಬಲೀಂದ್ರ ಪೂಜೆ, ಗೋಪೂಜೆ, ಸುಡುಮದ್ದು ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net