

ಕಾಸರಗೋಡು: ಯುನೈಟೆಡ್ ಬಂಟ್ಸ್ ಕಾಸರಗೋಡು ಪ್ರೀಮಿಯರ್ ಲೀಗ್‌ನಲ್ಲಿ ಎಂಟು ತಂಡಗಳು ಭಾಗವಹಿಸಿದ್ದು, ಬಂಟ್ಸ್ ಎಣ್ಮಕಜೆ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಎಸ್‌ವಿಪಿ ಬಂಟ್ಸ್ ಸ್ಟ್ರೈಕರ್ ದ್ವಿತೀಯ ಸ್ಥಾನವನ್ನು ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಮೋಹನ್ ರೈ ಕಯ್ಯರ್ ಅಧ್ಯಕ್ಷತೆ ವಹಿಸಿದ್ದರು. ಮಣಿಕಂಠ ರೈ ಪಟ್ಲ, ಜಗದೀಶ್ ಶೆಟ್ಟಿ ಎಲಿಯಾನ, ಸುಂದರಿ ಆರ್ ಶೆಟ್ಟಿ, ಚಂದ್ರಹಾಸ ರೈ ನಿರ್ಚಾಲು, ನಿಶಾನ್ ರೈ, ಮನೋಜ್ ರೈ, ಜಯರಾಜ್ ಶೆಟ್ಟಿ ಚಾರ್ಲ, ಪ್ರಶಾಂತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುನೈಟೆಡ್ ಬಂಟ್ಸ್ ಕಾಸ್ರೋಡ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಸ್ವಾಗತಿಸಿದರು. ರೋಹಿತ್ ರೈ, ಪ್ರಜ್ಞೇಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಸಂದೀಪ್ ರೈ, ಪ್ರಧೀಶ್ ಶೆಟ್ಟಿ, ಆಕಾಶ್, ವಿಷ್ಣು ನಿರೂಪಿಸಿಸಿದರು. ರಾಕೇಶ್ ಆರ್.ಶೆಟ್ಟಿ ಇಚ್ಲಂಗೋಡು ವಂದಿಸಿದರು.