

ಪುತ್ತೂರು ಗ್ರಾಮಾಂತರ: ಬಂಟರು ಸಮಾಜದ ಯಾವುದೇ ಒಳ್ಳೆಯ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಾಯಕತ್ವ ಗುಣ ಹೊಂದಿರುವವರು. ಉತ್ತಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಂಟರ ಸಂಘಕ್ಕೆ ಕೆಲವೇ ದಿನಗಳಲ್ಲಿ ಜಮೀನು ಮಂಜೂರು ಮಾಡಲಾಗುವುದು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಪುತ್ತೂರು ತಾಲೂಕು ಬಂಟರ ಸಂಘ ಆಶ್ರಯದಲ್ಲಿ ಬೆಟ್ಟಂಪಾಡಿಯ ಬಿಲ್ವಗಿರಿಯಲ್ಲಿ ಆಯೋಜಿಸಲಾಗಿದ್ದ 40 ವರ್ಷ ಮೇಲ್ಪಟ್ಟ ವಯೋಮಾನದ ಪುರುಷರ ವಿಭಾಗದ ‘ಬಂಟ್ ಲೆಜೆಂಟ್ಸ್ ಕಪ್’ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ತಂಡದ ಮಾಲೀಕರಾದ ಪುರಂದರ ರೈ ಮಿತ್ರಂಪಾಡಿ, ಸೂರ್ಯನಾಥ ಆಳ್ವ ಮಿತ್ತಳಿಕೆ, ಸತೀಶ್ ರೈ ಕಟ್ಟಾವು, ಶಿವಪ್ರಸಾದ್ ಶೆಟ್ಟಿ ಕಿನಾರ ಮಾತನಾಡಿದರು.
ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಇರ್ದೆ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬೈಲಾಡಿ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಸಂಘದ ಪ್ರಮುಖರಾದ ಜಯಪ್ರಕಾಶ್ ರೈ ನೂಜಿಬೈಲು, ಅನಿತಾ ಹೇಮನಾಥ ಶೆಟ್ಟಿ, ಭಾಗ್ಯೇಶ್ ರೈ, ಅವಿನಾಶ್ ರೈ ಕುಡ್ಚಿಲ, ರಾಧಾಕೃಷ್ಣ ರೈ ಪರಾರಿ, ಸಂತೋಷ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ದಯಾನಂದ ಶೆಟ್ಟಿ ಕೋರ್ಮಂಡ, ರವಿಪ್ರಸಾದ್ ಶೆಟ್ಟಿ ಬನ್ನೂರು, ಮನ್ಮಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ಸ್ ಚಾಲೆಂಜರ್ಸ್ ಪ್ರಥಮ
ಕ್ರಿಕೆಟ್ ಪಂದ್ಯಾಟದಲ್ಲಿ ಬಂಟ್ಸ್ ಚಾಲೆಂಜರ್ಸ್ ತಂಡ ಪ್ರಥಮ, ಬಂಟ್ಸ್ ರೋಯಲ್ ತಂಡ ದ್ವಿತೀಯ ಸ್ಥಾನ ಪಡೆದಿವೆ. ಮ್ಯಾನ್ ಆಫ್ ಮ್ಯಾಚ್ ಆಗಿ ಬೆಟ್ಟಂಪಾಡಿಯ ಸಂದೀಪ್ ರೈ, ಮ್ಯಾನ್ ಆಫ್ ದಿ ಸಿರೀಸ್ ಆಗಿ ನಿಶಾಂತ್ ಆಳ್ವ, ಉತ್ತಮ ಬೌಲರ್ ಆಗಿ ನಿತೇಶ್ ಶೆಟ್ಟಿ ಮರ್ದಾಳ, ಉತ್ತಮ ಬ್ಯಾಟ್ಸ್‌ಮನ್ ಆಗಿ ರಾಕೇಶ್ ರೈ ಬೋಳೋಡಿ ವೈಯಕ್ತಿಕ ಬಹುಮಾನ ಪಡೆದುಕೊಂಡರು.