ಬಂಟ ಸಮುದಾಯ ಮಾದರಿ: ಯು.ಟಿ.ಖಾದರ್ ಶ್ಲಾಘನೆ

bunts
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
Published on

ಮೂಲ್ಕಿ: ಮೂಲ್ಕಿ ಬಳಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ಸೋಮವಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಜರುಗಿತು.

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಬಂಟರು ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲೂ ಗುರುತಿಸಿಕೊಂಡವರಾಗಿದ್ದು ಮಾತ್ರವಲ್ಲದೆ ಸಾಧಕರಾಗಿದ್ದಾರೆ. ಜಾಗತಿಕ ಬಂಟರ ಸಂಘದ ವತಿಯಿಂದ ಪ್ರತಿ ತಿಂಗಳು ಸಮಾರು 15 ಲಕ್ಷ ರೂಪಾಯಿಯನ್ನು ಶಿಕ್ಷಣ, ವೈದ್ಯಕೀಯ ಚಿಕಿತ್ಸೆಗೆ ನೀಡುವುದೆಂದರೆ ಸಾಮಾನ್ಯ ವಿಷಯವಲ್ಲ. ಇದು ಎಲ್ಲ ಸಮಾಜಗಳಿಗೆ ಮಾದರಿ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಎಂಆರ್‌ಜಿ ಗ್ರೂಪ್ ಚೇರ್ಮನ್ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಸನ್ಮಾನಿಸಲಾಯಿತು.

ಅಂಕಣಕಾರ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಸತೀಶ್ ಶೆಟ್ಟಿ ಉಡುಪಿ, ಡಾ.ನಿರಂಜನ್ ಶೆಟ್ಟಿ ಕೆದೂರು, ದಯಾಮಣಿ ಶೆಟ್ಟಿ ಎಕ್ಕಾರ್, ನೀತಾ ರಾಜೇಶ್ ಶೆಟ್ಟಿ ಹಿರಿಯಡ್ಕ, ಅರ್ಪಿತಾ ಶೆಟ್ಟಿ ಕಟಪಾಡಿ, ಪತ್ರಕರ್ತರಾದ ಆರ್.ರಾಮಕೃಷ್ಣ, ಮಹಮ್ಮದ್ ಆರೀಫ್ ಪಡುಬಿದ್ರೆ, ನಿತಿನ್ ಸಾಲ್ಯಾನ್ ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು. ಒಕ್ಕೂಟ ಪೋಷಕರಾದ ಆನಂದ ಶೆಟ್ಟಿ ತೋನ್ಸೆ, ಪ್ರವೀಣ್ ಭೋಜ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ಉದ್ಯಮಿ ರಾಜೇಶ್ ಶೆಟ್ಟಿ ಮುಂಬೈ, ರವಿನಾಥ್ ಶೆಟ್ಟಿ ಅಂಕಲೇಶ್ವರ್, ವಕ್ವಾಡಿ ಪ್ರವೀಣ್ ಶೆಟ್ಟಿ ದುಬೈ, ಎಂ.ಕರುಣಾಕರ ಶೆಟ್ಟಿ, ಶಶಿಧರ ಶೆಟ್ಟಿ ಇನ್ನಂಜೆ, ನವೀನ್‌ಚಂದ್ರ ಶೆಟ್ಟಿ ಪಡುಬಿದ್ರಿ, ಶ್ರೀಧರ್ ಶೆಟ್ಟಿ ಅರೂರು, ಮನೋರಮ ಶೆಟ್ಟಿ, ಚಿತ್ರಾ ಶೆಟ್ಟಿ, ಥಾಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಅಶೋಕ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಆದರ್ಶ ಶೆಟ್ಟಿ ಹಾಲಾಡಿ, ನಾಗೇಶ್ ಶೆಟ್ಟಿ ವಸಾಯಿ, ಜಾಗತಿಕ ಬಂಟರ ಸಂಘ ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ ಶೆಟ್ಟಿ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು, ಪ್ರಿಯಾ ಹರೀಶ್ ಶೆಟ್ಟಿ, ಅಶೋಕ್ ಪಕ್ಕಳ ನಿರೂಪಿಸಿದರು.

ಕರಾವಳಿಯ ಕೃಷಿ ಪರಂಪರೆಯ ಬಂಟ ಸಮುದಾಯ ಭೂ ಮಸೂದೆಯಿಂದ ಭೂಮಿ ಕಳೆದುಕೊಂಡರೂ ಮತ್ತೆ ಎದ್ದು ನಿಂತು ಮಾದರಿಯಾಗಿ ಬದುಕುತ್ತಿದೆ. ಸುಂದರರಾಮ ಶೆಟ್ಟಿಯಂತಹ ಸಮಾಜ ಸುಧಾರಕರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿ ಬಂಟ ಸಮುದಾಯ ಮಾತ್ರವಲ್ಲ ಕರಾವಳಿಯ ಜನರ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ಕಲ್ಪಿಸಿದ್ದಾರೆ.ಯು.ಟಿ.ಖಾದರ್ ವಿಧಾನಸಭೆ ಸ್ಪೀಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net