ಕಲಾವಿದನ ಕುಟುಂಬಕ್ಕೆ ಆಸರೆಯಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟ

mng-18feb-home (2)
Published on


ಮಂಗಳೂರು : ನಾಟಕ ಕಲಾವಿದ ಅಶೋಕ್ ಅಂಬ್ಲಮೊಗರು ಇತ್ತೀಚೆಗೆ ನಿಧನರಾಗಿದ್ದು, ಅವರ ಕುಟುಂಬ ಕಡುಬಡತನದಲ್ಲಿ ಜೀವನ ನಡೆಸುವುದನ್ನು ಕಂಡು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದಿಂದ ಆರ್ಥಿಕ
ನೆರವು ಒದಗಿಸಿದ್ದಾರೆ.
ಕಲಾಸಂಗಮ ತಂಡದಲ್ಲಿದ್ದ ಅಶೋಕ್ ಅಂಬ್ಲಮೊಗರು ಒರಿಯರ್ದೊರಿ ಅಸಲ್ ನಾಟಕ ಹಾಗೂ ಸಿನಿಮಾದಲ್ಲಿ ತಾರಾಯಿದೆಪ್ಪುನ
ನಾಥುವಿನ ಪಾತ್ರದ ಮೂಲಕ ಜನಪ್ರಿಯರಾಗಿದ್ದರು. ಬಳಿಕ ತನ್ನದೇ ಆದ ಮಂಗಳ ಕಲಾವಿದೆರ್ ನಾಟಕ ತಂಡವನ್ನು ಕಟ್ಟಿ ಕಟ್ಟೆದ ಗುಳಿಗೆ ನಾಟಕವನ್ನು ರಚಿಸಿ ಪ್ರದರ್ಶಿಸಿದ್ದರು. ನಾಟಕದ ಜತೆಗೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಅಂಬ್ಲಮೊಗರು ಅವರ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ತೀರಾ ಬಡತನದಲ್ಲಿಎಉವ ವಿಚಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ತಂಡವೊಂದನ್ನು ಉಳ್ಳಾಲದ ಅಂಬ್ಲಮೊಗರುವಿಗೆ ಕಳುಹಿಸಿ ಮನೆಯ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಿದರು. ತಕ್ಷಣ ಆರ್ಥಿಕ ನೆರವು ನೀಡಿ ಕುಟುಂಬಕ್ಕೆ ವಾಸಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ತೀರಾ ಸಂಕಷ್ಟದಲ್ಲಿರುವ ಕಲಾವಿದನ ಕುಟುಂಬ ವಾಸಿಸಲು ಮನೆ ನಿರ್ಮಾಣದ ಅಗತ್ಯ ಇದೆ. ಈ ನಿಟ್ಟಿನಲ್ಲಿ ದಾನಿಗಳು, ಸಂಘಸಂಸ್ಥೆಗಳು , ಸಹೃದಯಿಗಳು ನೆರವು ನೀಡಬೇಕಾಗಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net