ಆವಿಷ್ಕಾರ್‌ನಲ್ಲಿ ಬಂಟಕಲ್ ವಿದ್ಯಾರ್ಥಿಗಳ ಸಾಧನೆ

students
ಅಂತರ್ ಕಾಲೇಜು ಐಡಿಯಾ ಪಿಚಿಂಗ್ ಸ್ಪರ್ಧೆ ಆವಿಷ್ಕಾರ್‌ನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ತಂಡ
Published on

ಶಿರ್ವ: ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ 3ನೇ ವರ್ಷದ ವಿದ್ಯಾರ್ಥಿಗಳಾದ ಪ್ರಿನ್ಸಿಯಾ ಡಿಅಲ್ಮೇಡಾ ಮತ್ತು ಪ್ರೇರಣಾ ಶೆಟ್ಟಿ ಇತ್ತೀಚೆಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್‌ನಲ್ಲಿ ನಡೆದ ಅಂತರ್ ಕಾಲೇಜು ಐಡಿಯಾ ಪಿಚಿಂಗ್ ಸ್ಪರ್ಧೆ ಆವಿಷ್ಕಾರ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾರ್ಷಿಕ ತಾಂತ್ರಿಕ ಹಬ್ಬದ ಅಂಗವಾಗಿ ನಡೆದ ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜಿನ 19 ತಂಡ ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net