ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಗೂಡ್ಸ್ ಕಂಟೇನರ್‌ನಲ್ಲಿದ್ದ 4.10 ಲಕ್ಷ ರೂ. ಮೌಲ್ಯದ 8 ರೆಡಿಮೇಡ್ ಬಟ್ಟೆಯ ಬಂಡಲ್‌ಗಳು ಕಳವಾಗಿವೆ. ಸಿ.ಪಿ. ವೀರೇಶ ಪಟ್ಟಣಶೆಟ್ಟಿ ಎಂಬುವರಿಗೆ ಈ ಬಟ್ಟೆ ಬಂಡಲ್‌ಗಳು ಸೇರಿವೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.