ಬಣವೆ, ಶೆಡ್ ಬೆಂಕಿಗಾಹುತಿ

Nrd banave
Published on

ನರಗುಂದ: ಆಕಸ್ಮಿಕವಾಗಿ ಬೆಂಕಿ ತಗುಲಿ 2 ಬಣವೆ ಹಾಗೂ ತಗಡಿನ ಮೂರು ಶೆಡ್‌ಗಳು ಸುಟ್ಟ ಘಟನೆ ಪಟ್ಟಣದ ದಂಡಾಪುರ ಬಡಾವಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಬಸಪ್ಪ ಕರಿಯಪ್ಪನವರ ದುಂಡಿ ಹಾಗೂ ಸಿದ್ದಪ್ಪ ಫಕೀರಪ್ಪ ದುಂಡಿ ಅವರ ಬಣವೆಗಳು ಸುಟ್ಟಿವೆ. ಬಣವಿ ಪಕ್ಕದಲ್ಲಿದ್ದ ಶಂಕ್ರಪ್ಪ ಹೂಗಾರ, ಬಸಪ್ಪ ಕರಿಯಪ್ಪ ದುಂಡಿ ಹಾಗೂ ಸಿದ್ದಪ್ಪ ದುಂಡಿ ಅವರ ಶೆಡ್‌ಗಳು ಭಾಗಶಃ ಸುಟ್ಟಿವೆ. ಶೆಡ್‌ನಲ್ಲಿದ್ದ ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದು ನರಗುಂದ ಮತ್ತು ಸವದತ್ತಿಯಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ, ಗ್ರಾಮಾಡಳಿತಾಧಿಕಾರಿ ಮಲ್ಲಿಕಾರ್ಜುನ ಶೆಟ್ಟರ, ಸಿಪಿಐ ಮಂಜುನಾಥ ನಡುವಿನಮನಿ, ಅಗ್ನಿಶಾಮಕದಳದ ಎಸ್.ಆರ್. ಹುಬ್ಬಳ್ಳಿ, ಎಂ.ಎಚ್. ಚಂದರಗಿ, ಎಸ್.ಎಂ. ನೇಕಾರ, ಎಂ.ಬಿ. ಭಾವಾಖಾನವರ, ಎಂ.ಆರ್. ನದಾಫ್, ಎಸ್.ಎಸ್. ಬೇಪಾರಿ, ಆರ್.ಎಂ. ಮುನೇನಕೊಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net