ಕಾಫಿ ಬೆಳೆಗಾರರಿಗೆ ಅಪತ್ತು ತಂದ ಬಂಪರ್ ಬೆಲೆ

14ald 6
Published on

ಆಲ್ದೂರು: ಹಲವು ವರ್ಷಗಳ ನಂತರ ಕಾಫಿಗೆ ಬಾರಿ ಬಂಬರ್ ಬೆಲೆ ಬಂದಿರುವುದು ಒಂದು ಕಡೆ ಕಾಫಿ ಬೆಳೆಗಾರರಿಗೆ ಸಂತಸ ತಂದರೆ, ಕಳ್ಳರು ಕಾಫಿ ಸಲು ಇರುವ ಕಾಫಿ ಗಿಡಗಳನ್ನು ಕಳ್ಳತನ ಮಾಡುತ್ತಿರುವುದರಿಂದ ಬೆಳೆಗಾರರು ಕಂಗಲಾಗಿದ್ದಾರೆ.

ಹಿಂದೆ ಕಾಫಿ ಬೆಳೆಗೆ ಉತ್ತಮ ಬೆಲೆ ಬಂದಾಗ ಕಳ್ಳರು ಮನೆ ಮುಂದೆ ಒಣಗಲು ಹಾಕಿದ್ದ ಕಾಫಿ ಬೀಜಗಳನ್ನು ಕಳವು ಮಾಡಿದ ಪ್ರಕರಣಗಳು ದಾಖಲಾಗುತ್ತಿದ್ದವು. ಸಾಮಾನ್ಯವಾಗಿ ಕಾಫಿ ಕಟಾವು ಸಮಯದಲ್ಲಿ ಈ ರೀತಿಯ ಕಳವು ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈ ವರ್ಷ ಕಾಫಿಗೆ ದಾಖಲೆ ಧಾರಣೆ ಬಂದಿರುವುದರಿಂದ ಕಳ್ಳರು ಕಾಫಿ ತೋಟದಲ್ಲಿ ಕಾಫಿಗಿಡದ ಸಲಿನ ರಂಬೆಗಳನ್ನೇ ಕತ್ತರಿಸಿ ಕಳವು ಮಾಡುತ್ತಿರುವುದರಿಂದ ಬೆಳೆಗಾರರು ಹೈರಾಣಾಗಿದ್ದಾರೆ.

ಆಲ್ದೂರು ಸಮೀಪದ ಗೆಂಡೇಹಳ್ಳಿ, ಗುಲ್ಲನ್‌ಪೇಟೆ ಸೇರಿದಂತೆ ಹಲವು ಭಾಗದ ಕಾಫಿ ತೊಟಗಳಲ್ಲಿ ಕಾಫಿ ಹಣ್ಣುಗಳನ್ನು ಕಳವು ಮಾಡಲಾಗಿದೆ. ಹೆಸರಾಂತ ಕಾಫಿ ಎಸ್ಟೇಟ್‌ಗಳಲ್ಲಿ ಕಳ್ಳತನ ನಡೆಯುತ್ತಿದ್ದರೂ ಯಾವ ಬೆಳೆಗಾರರು ದೂರು ದಾಖಲಿಸಿಲ್ಲ. ಜನ ನೀಬೀಡ ಪ್ರದೇಶಗಳ ಕಾಫಿ ತೋಟ ಹಾಗೂ ರಸ್ತೆ ಅಕ್ಕ ಪಕ್ಕದ ಕಾಫಿ ತೋಟಗಳಲ್ಲಿ ಇಂತಹ ಘಟನೆಗಳು ಸಾಮಾನವಾಗಿದೆ. ಕೆಲವು ಕಾಫಿ ತೋಟಗಳಲ್ಲಿ ಗಿಡಗಳಲ್ಲೇ ಕಾಫಿ ಹಣ್ಣುಗಳನ್ನು ಮಾತ್ರ ಕುಯ್ಯುತ್ತಿರುವುದು ಬೆಳೆಗಾರರಿಗೆ ತಲೆ ನೋವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net