ಎತ್ತುಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿ ದುರ್ಮರಣ

Crime Logo
Published on

ಹಾನಗಲ್ಲ: ಎತ್ತುಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ತಲೆ ಹಚ್ಚಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಚಿಕ್ಕೌಂಶಿ ಹೊಸೂರ ಗ್ರಾಮದಲ್ಲಿ ಸೋಮವಾರ ನಡೆದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಗ್ರಾಮದ ಮಂಜುನಾಥ ಎನ್​.ಎಂ. (42) ಮೃತ ವ್ಯಕ್ತಿ. ಇವರು ಚಿಕ್ಕೌಂಶಿ ಹೊಸೂರ ಗ್ರಾಮದಲ್ಲಿ ಹೊಸ ಎತ್ತುಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಎತ್ತುಗಳು ಹೆದರಿ ಈತನ ಮೈ ಮೇಲೆ ಏರಿ ಬಂದಿವೆ. ಇದರಿಂದ ಕೆಳಗೆ ಬಿದ್ದ ಮಂಜುನಾಥ ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net