ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ನಾಗರಿಕರ ವತಿಯಿಂದ ಡಿ. 7ರಂದು ಬೆಳಗ್ಗೆ ಶ್ರೀ ಶಿವಾಜಿ ಎಕ್ಸಪ್ರೆಸ್ ರಾಜ್ಯ ಮಟ್ಟದ ಎತ್ತುಗಳ ಖಾಲಿ ಗಾಡಿ ಓಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಕಾಡನಕೊಪ್ಪ ಗ್ರಾಮದಿಂದ ಮಿಶ್ರಿಕೋಟಿಗೆ ಹೋಗುವ ರಸ್ತೆ ರೈಲ್ವೆ ಸೇತುವೆ ಹತ್ತಿರ ಸ್ಪರ್ಧೆ ನಡೆಯಲಿದೆ.
ದಿ. ರಾಮಪ್ಪ ಸವ್ವಾಸೆ ಅವರ ಸ್ಮರಣೆಗಾಗಿ ಏರ್ಪಡಿಸಿರುವ ಸ್ಪರ್ಧೆಗೆ ಹಿಂದಕೇಸರಿ ಷರತ್ತು ಎಂದು ಹೆಸರಿಡಲಾಗಿದೆ. ಹಲವು ಬೈಕ್ ಗಳು ಸೇರಿ 31 ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.