ಎತ್ತು-ಕುದುರೆ ಇಜ್ಜೋಡಿ ಗಾಡಿ ಸ್ಪರ್ಧೆ

gls kudure rees
ಗೊಳಸಂಗಿಯಲ್ಲಿ ಪರಪ್ಪಮುತ್ಯಾರವರ ಜಾತ್ರೆ ನಿಮಿತ್ತ ಭಾನುವಾರ ಎತ್ತು-ಕುದುರೆ ಇಜ್ಜೋಡಿ ಗಾಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
Published on

ಗೊಳಸಂಗಿ: ಸ್ಥಳೀಯ ಮಸೂತಿ ರಸ್ತೆಯ ಪರಪ್ಪ ಮುತ್ಯಾರ ಜಾತ್ರೆ ನಿಮಿತ್ತ ಭಾನುವಾರ ಮುತ್ತಗಿ ರಸ್ತೆಯಲ್ಲಿ ಎತ್ತು-ಕುದುರೆ ಇಜ್ಜೋಡಿ ಗಾಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.

ನೆಹರು ಯುವಕ ಸಂಘದ ಅಧ್ಯಕ್ಷ ಅಮರೇಶಗೌಡ ಪಾಟೀಲ ಮಾತನಾಡಿ, ದುಡಿದು ದಣಿದ ತನುಮನಕ್ಕೆ ಜಾತ್ರೆಯಲ್ಲಿ ಏರ್ಪಡಿಸುವ ಆಟೋಟಗಳು ಮನ ತಣಿಸುವಂತಾಗಿದೆ. ಇಂಥ ಸ್ಪರ್ಧೆಗಳನ್ನು ಆಗಾಗ ಏರ್ಪಡಿಸಿ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಬೇಕು ಎಂದರು.

ಪ್ರಗತಿಪರ ರೈತ ಮಲ್ಲಪ್ಪ ಉಪ್ಪಲದಿನ್ನಿ ಸ್ಪರ್ಧೆಗೆ ಚಾಲನೆ ನೀಡಿದರು.

ಸೋಮನಾಥ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಬಸಪ್ಪ ನಡುವಿನಮನಿ, ಕಾಶಿನಾಥ ಪವಾರ, ಮಕಬೂಲ ನಾಗರಾಳ, ಹುಸೇನಸಾಬ ಹೆಬ್ಬಾಳ, ಮಲ್ಲಪ್ಪ ಹೊಸಮನಿ, ಶ್ರೀಧರ ಇಂಗಳೇಶ್ವರ, ಸಂಗಪ್ಪ ಕೋಲಾರ, ಬಸಪ್ಪ ಸುರಪುರ, ಸುಭಾಸ ಜಾಧವ, ಸುನೀಲ ಪವಾರ, ಮುದಕಪ್ಪ ಪರಮಗೊಂಡ, ಸುರೇಶ ಮಂಕಣಿ, ಮಹಮ್ಮದಸಾಬ ಟಕ್ಕಳಕಿ, ಈಶ್ವರ ಜಾಧವ ಇತರರಿದ್ದರು.

ಬಹುಮಾನ ವಿತರಣೆ: ಜಿಲ್ಲೆಯ ಒಟ್ಟು 19 ಎತ್ತು- ಕುದುರೆ ಇಜ್ಜೋಡಿ ಗಾಡಿಗಳು ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಇದರಲ್ಲಿ ಗೋನಾಳ-ಪಿಎಂನ ಸಂಗಯ್ಯ ಹಿರೇಮಠ(ಪ್ರಥಮ), ಹಿರೇಆಸಂಗಿಯ ಪಾಂಡು ಕುಂಬಾರ(ದ್ವಿತೀಯ), ಕೊಡಗಾನೂರಿನ ಅಜೀದ್ ಹಾಲಿಹಾಳ (ತೃತೀಯ), ಮಟ್ಟಿಹಾಳದ ಬೀರಪ್ಪ ಕಳಗೊಂಡ (ಚತುರ್ಥ), ಹೆಬ್ಬಾಳದ ಮನಿಕಂಠ ಮನಗೂಳಿ(ಐದನೇ ಸ್ಥಾನ), ಗೊಳಸಂಗಿಯ ಮಹಾದೇವ ಜಾಧವ ಅವರ ಎತ್ತು- ಕುದುರೆ ಗಾಡಿ 6ನೇ ಸ್ಥಾನ ಪಡೆದು ನಗದು ತಮ್ಮದಾಗಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net