ಎತ್ತಿನಗಾಡಿ ಓಟದ ಸ್ಪರ್ಧೆ ರೈತರಿಗೆ ಸ್ಫೂರ್ತಿ

KDR gadi
ಹರುವನಹಳ್ಳಿಯಲ್ಲಿ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಗೆ ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ಗಾಡಿ ಓಡಿಸುವ ಮೂಲಕ ಚಾಲನೆ ನೀಡಿದರು. ವಿನಯ್, ಮಧು, ಸುನೀಲ್ ಇತರರಿದ್ದರು.
Published on

ಕಡೂರು: ರಾಸುಗಳಿಗೂ ಮತ್ತು ರೈತನಿಗೂ ಅವಿನಾವಭಾವ ಸಂಬಂಧವಿದ್ದು, ಎತ್ತಿನಗಾಡಿ ಓಟದ ಸ್ಪರ್ಧೆ ರೈತರಿಗೆ ಮನರಂಜನೆ ಜತೆಗೆ ಕ್ರೀಡಾ ಸ್ಫೂರ್ತಿ ನೀಡುತ್ತದೆ ಎಂದು ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಹರುವನಹಳ್ಳಿಯಲ್ಲಿ ರಾಯಣ್ಣ ಯುವ ಪಡೆ ಎರಡು ದಿನಗಳ ಕಾಲ ಏರ್ಪಡಿಸಿದ್ದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಸದಾ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ರೈತರು ಬಯಲು ಭಾಗದಲ್ಲಿ ಇಂಥ ಕ್ರೀಡಾಕೂಟಗಳನ್ನು ಹೆಚ್ಚು ಆಯೋಜಿಸುವ ಮೂಲಕ ರಾಸುಗಳು ಮತ್ತು ಹಾಗೂ ರೈತರ ನಡುವೆ ಬಾಂಧವ್ಯ ಹೆಚ್ಚಲು ಸಹಕಾರಿಯಾಗಿದೆ. ಹರುವನಹಳ್ಳಿಯಲ್ಲಿ ಮೊದಲ ಬಾರಿಗೆ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾಂಗ್ರೆಸ್ ಯುವ ಮುಖಂಡ ವಿನಯ್, ರಾಯಣ್ಣ ಯುವ ಪಡೆ ಅಧ್ಯಕ್ಷ ಮಧು, ಸುನೀಲ್, ಸತೀಶ್, ತಮ್ಮಯ್ಯ, ಮೋಹನ್,
ಗ್ರಾಪಂ ಅಧ್ಯಕ್ಷ ರಘು, ಡೇರಿ ಆನಂದ್, ಯುವ ಪಡೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net