ಬುಲ್ಡೋಜರ್ ಸಂಸ್ಕೃತಿ ಜಾರಿಗೊಳಿಸಲು ಮುತಾಲಿಕ ಒತ್ತಾಯ

New Mutalik New
Published on

ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರಿಗೆ ಏನಾದರೂ ಕಳಕಳಿ ಇದ್ದರೆ ಕೊಲೆಗಡುಕನನ್ನು ಎನ್​ಕೌಂಟರ್ ಮಾಡಿಸಲಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಒತ್ತಾಯಿಸಿದ್ದಾರೆ.

ಇಲ್ಲಿನ ಕಿಮ್್ಸ ಶವಾಗಾರಕ್ಕೆ ಭೇಟಿ ನೀಡಿ, ನೇಹಾ ಹಿರೇಮಠಳ ಪಾಲಕರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುತಾಲಿಕ, ಇಸ್ಲಾಂನಲ್ಲಿ ಕೊಲೆ ಸಹಜ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಚಾಕು ಹಾಕಲು ಎಲ್ಲಿಯೋ ತರಬೇತಿ ಪಡೆದಿದ್ದಾನೆ ಎಂದರು.

ಇದು ಕಾಂಗ್ರೆಸ್ ಬೆಳೆಸಿದ ವಿಷ ಬೀಜ. ಕಾಂಗ್ರೆಸ್ ಹುಟ್ಟಿದಾಗ ಬ್ರಿಟೀಷರ ಪರ ಇದ್ದರು. ಈಗ ಮುಸ್ಲೀಮರು ಕೊಲೆಗಡುಕರ ಪರ ಇದ್ದಾರೆ. ಕೊಲೆಗಡುಕನ ಮನೆಗೆ ಬುಲೊ್ಡೕಜರ್ ಹಚ್ಚಿ, ಕಿತ್ತು ಬಿಸಾಕಬೇಕು. ಜಮಾತೆ ಇಸ್ಲಾಮಿನವರು ಕೂಡಲೆ ಫತ್ವಾ ಹೊರಡಿಸಿ ಕೊಲೆಗಡುಕನ ಕುಟುಂಬವನ್ನು ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ವಕೀಲರು ಕೊಲೆಗಡುಕನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಬಾರದು. ಕೊಲೆಗಡುಕ ಫಯಾಜ್, ನೇಹಾಳನ್ನು ಲವ್ ಮಾಡಿ, ಮತಾಂತರ ಮಾಡಲು ಮುಂದಾಗಿದ್ದ. ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಕೊಲೆ ಮಾಡಿದ್ದಾನೆ ಎಂದು ದೂರಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೆ ಈ ರೀತಿಯ ಕೊಲೆಗಳು ಆಗುತ್ತಿರುತ್ತವೆ. ರಾಜ್ಯದಲ್ಲೂ ಉತ್ತರ ಪ್ರದೇಶ ಮಾದರಿಯ ಬುಲ್ಡೋಜರ್ ಸಂಸ್ಕೃತಿ ಜಾರಿಯಾಗಬೇಕು. ಅಂದಾಗ ಮಾತ್ರ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ದೊರೆಯಲು ಸಾಧ್ಯ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net