

ಹಾವೇರಿ: ಎತ್ತಿನ ಚಕ್ಕಡಿಯಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ತಿರಕನಗೌಡ ಶಿವನಗೌಡ ಬೂದಗಟ್ಟಿ (28) ಮೃತ ವ್ಯಕ್ತಿ.
ಈತ ಎತ್ತಿನ ಚಕ್ಕಡಿ ಮೇಲೆ ನಿಂತು ಮೆಕ್ಕೆಜೋಳದ ತೆನೆ ತುಂಬಿಕೊಳ್ಳುತ್ತಿದ್ದ ಸಮಯದಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.