ಹಳಿಯಾಳ: ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಗ್ರಾಮದ ಹೋರಿ-ಎತ್ತುಗಳಿಂದ, ಗೋ-ಸಗಣಿಯಿಂದ ಮಾಡಿದ ಹೋಟೆವ್ವಾ ದಾಟಲು ಎತ್ತು-ಹೋರಿಗಳನ್ನು ಹಿಡಿದುಕೊಂಡು ಓಡುವ ಭಾರಿ ಸ್ಪರ್ಧೆ ಶೃದ್ದಾಭಕ್ತಿ ಮತ್ತು ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಆಚರಣೆಯ ಈ ಸ್ಪರ್ಧೆಯಲ್ಲಿ ಎತ್ತು ಅಥವಾ ಹೋರಿ ಹಿಡಿದುಕೊಂಡು ಓಡಿದ ಸ್ಪರ್ಧೆಯಲ್ಲಿ ಗ್ರಾಮದ ರಾಜು ಸಹದೇವ ಗೌಡಾ ಪ್ರಥಮ ಸ್ಥಾನ ಪಡೆದರೇ, ದ್ವಿತೀಯ ಸ್ಥಾನವನ್ನು ಮಂಜುನಾಥ ವಸಂತ ಪಾಟೀಲ ಮತ್ತು ಮೂರನೆ ಸ್ಥಾನ ಆನಂದ ಗೇನಪ್ಪಾ ಗೌಡಾ ಪಡೆದುಕೊಂಡರು.
ವಿಜೇತರಿಗೆ ಗ್ರಾಮದ ಶ್ರೀ ಲಕ್ಷ್ಮೀದೇವಿ ದೈವ ಕಮೀಟಿಯಿಂದ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀದೇವಿ ದೈವ ಕಮೀಟಿಯ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು ಇದ್ದರು.